ಪುತ್ತೂರು : ಪುತ್ತೂರಿನ ಶಾಸಕ ಅಶೋಕ್ ಕುಮಾರ್ ರೈ ಅವರು ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ ಪಣತೊಟ್ಟು ಕೆಲಸ ಮಾಡುತ್ತಿದ್ದು ಜಾತಿ,ಧರ್ಮ,ಪಕ್ಷ ಭೇದ ವಿಲ್ಲದೆ ಕಾಂಗ್ರೆಸ್‌ ಪಕ್ಷದ ಜಾತ್ಯತೀತ ತತ್ವದಲ್ಲಿ ನಂಬಿಕೆ ಇಟ್ಟು ಸರ್ವರಿಗೂ ಸಮಬಾಲು ಸರ್ವರಿಗೂ ಸಮಪಾಲು ಎಂಬ ನೆಲೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಕ್ಷೇತ್ರದ ಜನರಿಗೆ ಯಾವ ರೀತಿಯ ಅಭಿವೃದ್ಧಿ ಬೇಕು ಅದಕ್ಕೆ ಪೂರಕವಾಗಿ ಅನುದಾನಗಳನ್ನು ತಂದು ಪುತ್ತೂರನ್ನು ಮಾದರಿ ಕ್ಷೇತ್ರವಾಗಿ ರೂಪಿಸುವ ಕೆಲಸದಲ್ಲಿ ನಿರತರಾಗಿದ್ದಾರೆ.ಮೊದಲೇ ಕೊಡುಗೈ ದಾನಿಯಾಗಿ ಬಡ ಜನರಿಗೆ ನೆರವಾಗಿ ಅದೆಷ್ಟೋ ಕುಟುಂಬಗಳ ಕಣ್ಣೀರೊರೆಸಿ ಸರ್ವರ ಪ್ರೀತಿಗೆ ಪಾತ್ರರಾಗಿರುವ ಶಾಸಕರು, ಅಲ್ಪ ಸಂಖ್ಯಾತರಿಗೂ ನ್ಯಾಯವನ್ನು ಒದಗಿಸುವ ಕೆಲಸ ಮಾಡುತ್ತಿದ್ದಾರೆ. ಇತ್ತೀಚೆಗೆ ಕೆಲವು ಮಸೀದಿಗಳಿಗೆ ಲಕ್ಷಾಂತರ ರೂ. ಅನುದಾನವನ್ನು ತಂದು ಕೊಟ್ಟಿದ್ದು ,ಅದೆಷ್ಟೋ ಮಸೀದಿ ,ಮದ್ರಸಗಳ,ವಿದ್ಯಾಸಂಸ್ಥೆಗಳ ರಸ್ತೆಗಳ ಅಭಿವೃದ್ಧಿ ಗೆ ಅನುದಾನ ಕೊಟ್ಟಿದ್ದಾರೆ. ಹೀಗೆ ಎಲ್ಲರನ್ನೂ ಜೊತೆ ಸೇರಿಸಿ ಕಾಂಗ್ರೆಸ್ ನ ಜಾತ್ಯಾತೀತ ತತ್ವದಂತೆ ಮಖ್ಯ ಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ನಾಡಿನ ಅಭಿವೃದ್ಧಿಯ ಕನಸಿನಂತೆ ಉತ್ತಮ ಅಭೂತಪೂರ್ವ ಅಭಿವೃದ್ಧಿ ಯ ಕೆಲಸ ಮಾಡುತ್ತಿದ್ದು ,ಈ ಸಂದರ್ಭದಲ್ಲಿ ನಾವು ಅವರನ್ನು ಬೆಂಬಲಿಸಿ ಅವರ ಕೈ ಬಲಪಡಿಸಬೇಕು ವಿನಾ ಅಪಪ್ರಚಾರ ನಡೆಸ ಬಾರದು ಎಂದು ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತ ವಿಭಾಗದ ಅಧ್ಯಕ್ಷ ಹಾಜಿ ಅಬ್ದುಲ್ ರಹಿಮಾನ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.