ಮುಂಬಯಿ :
ಆರ್ಥಿಕ ಸಂಕಷ್ಟದಿಂದಾಗಿ ಉದ್ಯೋಗಿಗಳಿಗೆ ಸಂಬಳ ನೀಡದ ಸ್ಥಿತಿ ಬೈಜೂಸ್‌ನಲ್ಲಿತ್ತು. ಕಂಪನಿಯ ಸಂಸ್ಥಾಪಕ ಬೈಜು ರವೀಂದ್ರನ್, ತಮ್ಮ ಮನೆಯನ್ನು ಅಡಮಾನವಾಗಿಟ್ಟು ಹಣ ಸಂಗ್ರಹಿಸಿ ಉದ್ಯೋಗಿಗಳಿಗೆ ನವೆಂಬರ್ ತಿಂಗಳ ವೇತನವನ್ನು ನೀಡಿದ್ದಾರೆ. ಕುಟುಂಬ ಸದಸ್ಯರಿಂದಲೂ ಹಣ ಪಡೆದಿದ್ದಾರೆ ಎಂದು ವರದಿಯಾಗಿದೆ.

ವಿವಾದ, ಸಂಕಷ್ಟಕ್ಕೆ ಸಿಲುಕುತ್ತಿ ರುವ ಕಂಪನಿ, ಹಲವು ಉದ್ಯೋಗಿಗಳಿಗೆ ನವೆಂಬರ್ ತಿಂಗಳ ವೇತನವನ್ನು ಪಾವತಿ ಮಾಡಿರಲಿಲ್ಲ. ಸೋಮವಾರ ಒಂದು ಸಾವಿರ ಉದ್ಯೋಗಿಗಳಿಗೆ ಬಾಕಿ ವೇತನ ಪಾವತಿ ಮಾಡಿದೆ.

ಹಠಾತ್ ತಾಂತ್ರಿಕ ದೋಷವೇ ಸಂಬಳ ವಿಳಂಬಕ್ಕೆ ಕಾರಣ ಎಂದು ಬೈಜೂಸ್ ಕಾರಣ ನೀಡಿತ್ತು. ಸಮಸ್ಯೆಯನ್ನು ಪರಿಹರಿಸುವ ನೀಡಿತ್ತು. ಡಿಸೆಂಬರ್ 4ರ ಸೋಮವಾರ ದೊಳಗೆ ಸಂತ್ರಸ್ತ ಉದ್ಯೋಗಿಗಳ ವೇತನವನ್ನು ಅವರ ಖಾತೆಗಳಿಗೆ ಜಮೆ ಮಾಡುವ ಭರವಸೆಯನ್ನು ನೀಡಿತ್ತು.