Join The Telegram | Join The WhatsApp |
ಮೂಡಲಗಿ :
ತಂದೆ ತಾಯಿಗಳು ತಮ್ಮ ಮಕ್ಕಳ ಭವಿಷ್ಯಕ್ಕಾಗಿ ಅದೆಷ್ಟೋ ಕನಸುಗಳನ್ನು ಹೆಣೆದಿರುತ್ತಾರೆ. ಅದೆಷ್ಟೋ ತಂದೆ- ತಾಯಂದಿರು ತಮ್ಮ ಹೊಟ್ಟೆಗೆ ಅನ್ನ ಇಲ್ಲದಿದ್ದರೂ ಮಕ್ಕಳ ಹೊಟ್ಟೆಗೆ ಅನ್ನ ನೀಡಬೇಕೆಂದು ಶ್ರಮಿಸುತ್ತಾರೆ. ಆದ್ದರಿಂದ ಪಾಲಕರು ಮಕ್ಕಳಿಗಾಗಿ ಆಸ್ತಿ ಮಾಡಬೇಡಿ, ಬದಲಾಗಿ ಮಕ್ಕಳಿಗೆ ಶೈಕ್ಷಣಿಕವಾಗಿ ಉತ್ತಮ ಶಿಕ್ಷಣ ನೀಡಿ ದೇಶದ ಆಸ್ತಿಯನ್ನಾಗಿ ಮಾಡಿ ಎಂದು ಶಾಸಕ ಹಾಗೂ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಹೇಳಿದರು.
ಸೋಮವಾರದಂದು ನಾಗನೂರ-ಮೂಡಲಗಿಯ ಮೇಘಾ ಕನ್ನಡ ಮತ್ತು ಆಂಗ್ಲ ಮಾಧ್ಯಮ ಪ್ರಾಥಮಿಕ ಮತ್ತು ಪ್ರೌಢ ಶಾಲೆಯ ಆವರಣಲ್ಲಿ ಜರುಗಿದ, ಮೇಘಾ ಸಾಂಸ್ಕೃತಿ ಸಿರಿ ಹಾಗೂಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳ ಬೀಳ್ಕೋಡುವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಗ್ರಾಮೀಣ ಭಾಗದ ಶಾಲೆಗಳಲ್ಲಿ ಇಂಗ್ಲೀಷ ಮಾತನಾಡುವುದೇ ಸಾಧನೆಯಾಗುತ್ತಿತು. ಆದರೆ ಇವತ್ತಿನ ದಿನಮಾನಗಳಲ್ಲಿ ಗ್ರಾಮೀಣ ಭಾಗದ ಪ್ರತಿಯೊಬ್ಬರು ಇಂಗ್ಲೀಷ ಭಾಷೆಯನ್ನು ಕಲಿತಿರುವುದು ಇಡೀ ದೇಶಕ್ಕೆ ಹೆಮ್ಮಯ ಸಂಗತಿಯಾಗಿದ್ದು, ಪಾಲಕರು ತಮ್ಮ ಮಕ್ಕಳಿಗೆ ಶಿಕ್ಷಣವನ್ನು ಕಲಿಸಿ ಶಿಕ್ಷಣವನ್ನು ಉಳಿಸಿ ಎಂದು ಹೇಳಿದರು.
ಸಮಾಜ ನಮಗಾಗಿ ಏನು ಕೊಟ್ಟಿದೆ ಎನ್ನವುದಕ್ಕಿಂತ ಸಮಾಜಕ್ಕಾಗಿ ನಾವು-ನೀವು ಏನು ಕೊಟ್ಟಿದ್ದೇವೆ ಎನ್ನುವುದು ಮುಖ್ಯ. ಗ್ರಾಮೀಣ ಭಾಗದ ಮಕ್ಕಳು ಐಎಎಸ್, ಕೆಎಎಸ್‌ನಂತಹ ಪರೀಕ್ಷೆಗಳಲ್ಲಿ ಪಾಸಾಗಿ ಉನ್ನತ ಹುದ್ದೆಯನ್ನು ಅಲಂಕರಿಸಬೇಕು. ಸಮಾಜವೂ ಆರ್ಥೀಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ಅಭಿವೃದ್ಧಿಪಥದತ್ತ ಸಾಗವೇಕಾದರೆ ಶಿಕ್ಷಣ ಬೇಕೇ ಬೇಕು. ಪ್ರತಿಯೊಬ್ಬರು ಒಗ್ಗಟ್ಟಾಗಿ ಒಂದಾಗಿ ಮಕ್ಕಳ ಶಿಕ್ಷಣದ ಅಭಿವೃದ್ಧಿ ಗೋಸ್ಕರವಾಗಿ ಶ್ರಮಿಸೋಣ ಎಂದರು.
ಮೇಘಾ ಶಿಕ್ಷಣ ಸಂಸ್ಥೆಯ ಸುಮಾರು 950 ವಿದ್ಯಾರ್ಥಿಗಳಿಗೆ ಗುಣ ಮಟ್ಟದ ಶಿಕ್ಷಣ ನಿಡುತ್ತಿರುವುದ ಶ್ಲಾಘನಿಯ, ಶಾಲೆಯ ವಿದ್ಯಾರ್ಥಿಗಳು ಆಂಗ್ಲ ಭಾಷೆಯಲ್ಲಿ ಮಾತನಾಡುತ್ತಿರುವುದು ಸಂತೋಷದ ಸಂಗತಿ, ವಿದ್ಯಾರ್ಥಿಗಳು ಕನ್ನಡ ಭಾಷೆಯೊಂದಿಗೆ ಆಂಗ್ಲ ಮತ್ತು ಹಿಂದಿ ಭಾಷೆಯನ್ನು ಕಲಿತರೆ ಯಾವುದೇ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಕೆಲಸ ಮಾಡಲಿಕ್ಕೆ ಅನುಕೂವಾಗುತ್ತದೆ ಎಂದ ಅವರು ಮೇಘಾ ಶಿಕ್ಷಣ ಸಂಸ್ಥೆಯು ಮೂಡಲಗಿ ತಾಲೂಕಿಗೆ ಮತ್ತು ಅರಭಾವಿ ಕ್ಷೇತ್ರಕ್ಕೆ ಅನುಕೂಲವಾಗಬೇಕು ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು.
ಸಂಸ್ಥೆಯಿoದ ಸತ್ಕಾರ ಸ್ವೀಕರಿದ ಶಾಸಕ ಹಾಗೂ ಕೆಎಮ್‌ಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು, ಕಳೆದ ವರ್ಷದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳನ್ನು ಸತ್ಕರಿಸಿದರು.
ಸಂಸ್ಥೆಯ ಅಧ್ಯಕ್ಷ ಮಲ್ಲಪ್ಪ ಗಾಣಿಗೇರ, ಪುರಸಭೆ ಅಧ್ಯಕ್ಷ ಹಣಮಂತ ಗುಡ್ಲಮನಿ, ಬಿಇಒ ಅಜೀತ ಮನ್ನಿಕೇರಿ, ಗುಂಡಪ್ಪ ಕಾಳಪ್ಪಗೋಳ, ಸಂತೋಷ ಸೋನವಾಲ್ಕರ, ಮುತ್ತಪ್ಪ ಈರಪ್ಪನ್ನವರ, ಸಂತೋಷ ಪಾರ್ಶಿ, ಶ್ರೀಶೈಲ ಗಾಣಿಗೇರ, ಪಿಎಸ್.ಆಯ್ ಎಚ್.ವಾಯ್.ಬಾಲದಂಡಿ, ಅನ್ವರ ನದಾಫ್, ಬಸು ಝಂಡೇಕುರಬರ, ಜಿ.ಎಂ.ಪಾಟೀಲ ಮತ್ತಿತರರು ಇದ್ದರು.
Join The Telegram | Join The WhatsApp |