ಅಯೋಧ್ಯೆ: ಬಾಲ ರಾಮನ ಮಂದಿರದ ಬಾಗಿಲು ಇನ್ನು ಮುಂದೆ ಪ್ರತಿದಿನ ಒಂದು ಗಂಟೆ ಮುಚ್ಚಿರಲಿದೆ.

ಈ ವೇಳೆ ಭಕ್ತರಿಗೆ ಬಾಲರಾಮನ ದರ್ಶನಕ್ಕೆ ಅವಕಾಶ ವಿರುವುದಿಲ್ಲ ಎಂದು ಮಂದಿರದ ಪ್ರಧಾನ ಅರ್ಚಕರು ತಿಳಿಸಿದ್ದಾರೆ.

ಬಾಲರಾಮ ಇನ್ನೂ ಐದು ವರ್ಷದವನು. ದೀರ್ಘ ಸಮಯದವರೆಗೆ ಎಚ್ಚರವಿರಲು ಸಾಧ್ಯವಿಲ್ಲ. ಬಾಲರಾಮನಿಗೆ ವಿಶ್ರಾಂತಿಯ ಅಗತ್ಯವಿರುತ್ತದೆ. ಹೀಗಾಗಿ ಪ್ರತಿದಿನ ಮಧ್ಯಾಹ್ನ 12.30-1.30 ಸಮಯದಲ್ಲಿ ಬಾಗಿಲನ್ನು ಮುಚ್ಚಲು ಟ್ರಸ್ಟ್ ನಿರ್ಧರಿಸಿದೆ ಎಂದು ಪ್ರಧಾನ ಅರ್ಚಕ ಆಚಾರ್ಯ ಸತ್ಯೇಂದ್ರ ದಾಸ್‌ ತಿಳಿಸಿದ್ದಾರೆ.