
ಹೆಬ್ರಿ : ಶ್ರೀ ಅರ್ಧನಾರೀಶ್ವರ ಅಬ್ಬಗದಾರಗ ದೇವಸ್ಥಾನ ಬಲ್ಲಾಡಿ ಮುದ್ರಾಡಿ ಇದರ ನೂತನ ವ್ಯವಸ್ಥಾಪನ ಸಮಿತಿ ರಚನೆಗೊಂಡಿದ್ದು ಅಧ್ಯಕ್ಷರಾಗಿ ಶುಭಧರ ಶೆಟ್ಟಿ ಆಯ್ಕೆಯಾಗಿದ್ದಾರೆ. ಸಮಿತಿಯ ಸದಸ್ಯರಾಗಿ ಶ್ರೀಶ ಭಟ್, ಲೀಲಾವತಿ, ಪ್ರಮೀಳಾ, ಸುಧಾ, ಎಸ್.ತಿಮ್ಮಪ್ಪ ಶೆಟ್ಟಿಗಾರ್, ವಿಶು ಕುಮಾರ್, ಕೃಷ್ಣ ಆಚಾರ್ಯ, ಸುಧಾಕರ ಶೆಟ್ಟಿ ಆಯ್ಕೆಯಾಗಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.