Join The Telegram | Join The WhatsApp |
ಹೈದರಾಬಾದ್-
2022ರ ಆವೃತ್ತಿಯ ಪ್ರೋ ಕಬಡ್ಡಿ ಲೀಗ್ ನಲ್ಲಿ ಹೈದರಾಬಾದ್ ನ ಗಚಿಬೌಲಿ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಬೆಂಗಳೂರು ಬುಲ್ಸ್ ಯುಪಿ ಯೋಧಾಸ್ ಪಂದ್ಯದಲ್ಲಿ ಬುಲ್ಸ್ ತಂಡವು ಯೋಧಾಸ್ ತಂಡವನ್ನು 38-35 ಅಂಕಗಳ ಅಂತರದಿಂದ ಸೋಲಿಸುವ ಮೂಲಕ ಕ್ವಾಲಿಫೈಯರ್ ಹಂತವನ್ನು ತಲುಪಿದ ಮೂರನೇ ತಂಡವಾಗಿದೆ. ಜೈಪುರ ಪಿಂಕ್ ಪ್ಯಾಂಥರ್ಸ್ ಮತ್ತು ಪುಣೇರಿ ಪಲ್ಟನ್ ಈಗಾಗಲೇ ಪ್ರೊ ಕಬಡ್ಡಿ 2022 ಪ್ಲೇಆಫ್‌ನಲ್ಲಿ ತಮ್ಮ ಸ್ಥಾನಗಳನ್ನು ಖಚಿತಪಡಿಸಿಕೊಂಡಿವೆ.
ಬೆಂಗಳೂರು ಬುಲ್ಸ್ ಆಡಿದ 20 ಪಂದ್ಯಗಳಲ್ಲಿ 12 ಜಯ ಪಡೆದು, 7 ಸೋಲು ಅನುಭವಿಸಿ 68 ಅಂಕಗಳನ್ನು ಪಡೆದಿದೆ. ತಂಡದ ಇನ್ನೂ 2 ಪಂದ್ಯಗಳು ಬಾಕಿಯಿವೆ.
Join The Telegram | Join The WhatsApp |