Join The Telegram | Join The WhatsApp |
ಬೆಂಗಳೂರು-
ರಾಜಧಾನಿ ಬೆಂಗಳೂರಿನ ಅತ್ಯಂತ ಪ್ರಮುಖ ಸ್ಥಳವಾದ ರೇಸ್‌ಕೋರ್ಸ್ ಮುಂಭಾಗ ರಸ್ತೆಯ ಹೆಸರು ಬದಲಾಗಿದೆ. ಇನ್ನು ಮುಂದೆ ರೇಸ್‌ಕೋರ್ಸ್ ರಸ್ತೆ ಅಲ್ಲ. ರೆಬೆಲ್ ಸ್ಟಾರ್ ಡಾ.ಎಂ.ಎಚ್ ಅಂಬರೀಶ್ ರಸ್ತೆ ಎಂದಾಗಿದೆ.
ರಾಜಧಾನಿ ಬೆಂಗಳೂರಿನ ಮೌರ್ಯ ಸರ್ಕಲ್ ನಿಂದ ಬಸವೇಶ್ವರ್ ಸರ್ಕಲ್‌ವರೆಗಿನ ರೇಸ್ ಕೋರ್ಸ್ ರಸ್ತೆಗೆ ರೆಬೆಲ್ ಸ್ಟಾರ್ ಡಾ.ಎಂ.ಎಚ್ ಅಂಬರೀಶ್ ರಸ್ತೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಾಮಕರಣ ಮಾಡಿ ನಾಮಫಲಕ ಅನಾವರಣಗೊಳಿಸಿದರು.
ಈ ಸಂದರ್ಭದಲ್ಲಿ ಮಂಡ್ಯ ಸಂಸದೆ ಸುಮಲತಾ ಅಂಬರೀಶ್, ಪುತ್ರ ಅಭಿಷೇಕ್ ಅಂಬರೀಶ್, ನಟ ರಾಘವೇಂದ್ರ ರಾಜ್ ಕುಮಾರ್, ಫಿಲಂ ಚೇಂಬರ್ ಅಧ್ಯಕ್ಷ ಭಾ.ಮ ಹರೀಶ್ , ರಾಕ್ ಲೈನ್ ವೆಂಕಟೇಶ್, ಚಿನ್ನೆಗೌಡ ಮತ್ತಿತರು ಹಾಜರಿದ್ದರು.
Join The Telegram | Join The WhatsApp |