ಬೆಳಗಾವಿ:
ಬಸವರಾಜ ಎ. ಕುಮಸಿ ಅವರು ದೈಹಿಕ ಶಿಕ್ಷಣ ವಿಷಯದಲ್ಲಿ “ಕೋರಿಲೇಶನ್ ಬಿಟ್ವೀನ್ ಸೆಲೆಕ್ಟೆಡ್ ಸೈಕಾಲಾಜಿಕಲ್ ವೇರಿಯೇಬಲ್ಸ್ ಆ್ಯಂಡ್ ಅಕಾಡೆಮಿಕ್ ಅಚೀವ್ ಮೆಂಟ್ ಆಫ್ ಸ್ಪೋರ್ಟ್ಸ್ ಹಾಸ್ಟೆಲ್ ಪ್ಲೇಯರ್ಸ್” ಎಂಬ ವಿಷಯದ ಕುರಿತು ಮಂಡಿಸಿದ ಸಂಶೋಧನಾ ಮಹಾ ಪ್ರಬಂಧಕ್ಕೆ ಕುವೆಂಪು ವಿಶ್ವವಿದ್ಯಾಲಯ ಪಿಹೆಚ್‌ಡಿ ಪದವಿ ನೀಡಿದೆ.
ಪ್ರಸ್ತುತ ಇವರು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಸಂಗೊಳ್ಳಿ ರಾಯಣ್ಣ ಪ್ರಥಮ ದರ್ಜೆ ಘಟಕ ಮಹಾವಿದ್ಯಾಲಯದ ದೈಹಿಕ ಶಿಕ್ಷಣ ವಿಭಾಗದಲ್ಲಿ ಸಹಾಯಕ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರಿಗೆ ಕುವೆಂಪು ವಿಶ್ವವಿದ್ಯಾಲಯದ ದೈಹಿಕ ಶಿಕ್ಷಣ ವಿಭಾಗದ ಸಹಾಯಕ ನಿರ್ದೇಶಕ ಡಾ. ರವೀಂದ್ರ ಗೌಡ ಎಸ್. ಎಂ. ಅವರು ಮಾರ್ಗದರ್ಶಕರಾಗಿದ್ದರು.