
ಬಸ್ರೂರು : ಶ್ರೀ ಶಾರದಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕಿಂಡರ್ ಗಾರ್ಡನ್ ಮಕ್ಕಳ ಪದವಿ ಪ್ರದಾನ ಸಮಾರಂಭವನ್ನು ಭವ್ಯವಾಗಿ ಆಯೋಜಿಸಲಾಗಿತ್ತು.
ಮುಖ್ಯ ಅತಿಥಿಯಾಗಿ ಆಗಮಿಸಿದ ಪ್ರಾಥಮಿಕ ಆರೋಗ್ಯ ಕೇಂದ್ರ ಬಸ್ರೂರು ಇಲ್ಲಿನ ಡಾ. ವಿದ್ಯಾ ಅವರು , “ಮಕ್ಕಳ ಪ್ರಾಥಮಿಕ ಶಿಕ್ಷಣವು ಅವರ ಭವಿಷ್ಯದ ಭದ್ರ ಪಾಯವಷ್ಟೇ ಅಲ್ಲ, ಆರೋಗ್ಯಕರ ಜೀವನಶೈಲಿಗೂ ಒಂದು ಬುನಾದಿ. ಪೋಷಕರು ಮಕ್ಕಳಿಗೆ ಪೌಷ್ಟಿಕ ಆಹಾರ ನೀಡುವುದರೊಂದಿಗೆ ಆರೋಗ್ಯವಂತರಾಗಿ ಬೆಳೆಯಲು ಸಹಕರಿಸಬೇಕು” ಎಂದು ಹೇಳಿದರು.
ಶಾಲಾ ಸಂಚಾಲಕ ಸಂತೋಷ್ ಶೆಟ್ಟಿ ಅವರು, “ಇಂದಿನ ಪುಟ್ಟ ಮಕ್ಕಳ ಈ ಸಾಧನೆಯು ಅವರ ಭವಿಷ್ಯದ ಪಯಣದಲ್ಲಿ ಮೊದಲ ಹೆಜ್ಜೆಯಾಗಿದೆ. ಅವರ ಬೆಳವಣಿಗೆಯಲ್ಲಿ ಪಾಲ್ಗೊಳ್ಳುವುದು ನಮ್ಮೆಲ್ಲರ ಪಾಲಿಗೆ ಅದೃಷ್ಟದ ಸಂಗತಿ,” ಎಂದರು.
ಕಾರ್ಯಕ್ರಮದ ಭಾಗವಾಗಿ ಮಕ್ಕಳ ಕಲಾತ್ಮಕ ಪ್ರದರ್ಶನ, ನೃತ್ಯ, ಹಾಗೂ ವಿದಾಯ ಭಾಷಣಗಳು ಕಾರ್ಯಕ್ರಮವನ್ನು ಇನ್ನಷ್ಟು ಸ್ಮರಣೀಯಗೊಳಿಸಿದವು.ಪೋಷಕರು, ಶಿಕ್ಷಕರು ಮತ್ತು ಅತಿಥಿಗಳು ಮಕ್ಕಳ ಸಾಧನೆಗೆ ಹರ್ಷ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಶಾಲಾ ಶೈಕ್ಷಣಿಕ ನಿರ್ದೇಶಕ ಪ್ರಕಾಶ್ ಶೆಟ್ಟಿ , ಪ್ರಾಂಶುಪಾಲರಾದ ಶ್ರೀಮತಿ ಮಮತಾ ಪೂಜಾರಿ, ಆಡಳಿತ ಅಧಿಕಾರಿ ಶ್ರೀಮತಿ ಆಶಾ ಶೆಟ್ಟಿ ಉಪಸ್ಥಿತರಿದ್ದರು .
ಕಾರ್ಯಕ್ರಮವನ್ನು ಐಯಾಂಕ್ . ಬಿ.ಪೂಜಾರಿ ಸ್ವಾಗತಿಸಿ, ಆರುಷ್ ಅಸ್ಪಾಕ್ ವಂದಿಸಿದರು.