ಶಿರಸಿ : ಶಾಸಕ ಭೀಮಣ್ಣ ನಾಯಕ ಹಾಗೂ ಇತರರ ಮೇಲೆ ಬುಧವಾರ ಜೇನುನೊಣಗಳ ಹಿಂಡು ದಾಳಿ ನಡೆಸಿದ್ದು ಶಾಸಕರು ಇದೀಗ ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಾಗಿದ್ದಾರೆ. ಕೆಂಗ್ರೆಹೊಳೆ ಬಳಿ ಅವರು ಪೌರಾಯುಕ್ತ ಕಾಂತರಾಜ ಮತ್ತು ಸದಸ್ಯ ಖಾದರ್ ಅನವಟ್ಟಿ ಅವರ ಜೊತೆಗೆ ನೀರಿನ ಮಟ್ಟ ಪರಿಶೀಲನೆಗೆ ಹೋದ ಸಂದರ್ಭದಲ್ಲಿ ಏಕಾಏಕಿ ಜೇನುನೊಣಗಳ ಹಿಂಡು ದಾಳಿ ನಡೆಸಿವೆ.