ಬೆಳಗಾವಿ: ಲೋಕಸಭಾ ಸಾರ್ವತ್ರಿಕ ಚುನಾವಣೆಗೆ ಸಂಬಂಧಿಸಿದಂತೆ ಬೆಳಗಾವಿ ಜಿಲ್ಲೆಯಲ್ಲಿ ಒಟ್ಟು 41 ನಾಮಪತ್ರ ಕ್ರಮಬದ್ಧವಾಗಿವೆ. ಚಿಕ್ಕೋಡಿ ಕ್ಷೇತ್ರಕ್ಕೆ ಸಲ್ಲಿಕೆಯಾಗಿದ್ದ 20 ನಾಮಪತ್ರ ಹಾಗೂ ಬೆಳಗಾವಿ ಕ್ಷೇತ್ರಕ್ಕೆ ಸಲ್ಲಿಕೆಯಾಗಿದ್ದ 21 ನಾಮಪತ್ರ ಕ್ರಮಬದ್ದವಾಗಿವೆ.

ಚಿಕ್ಕೋಡಿ ಕ್ರಮಬದ್ಧ ನಾಮಪತ್ರ ವಿವರ: ಬಿಜೆಪಿಯ ಅಣ್ಣಸಾಹೇಬ ಜೊಲ್ಲೆ, ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ಪಕ್ಷದ ಪ್ರಿಯಾಂಕಾ ಜಾರಕಿಹೊಳಿ, ಸರ್ವ ಜನತಾ ಪಕ್ಷದ ಅಪ್ಪಾಸಾಹೇಬ ಕುರಣೆ, ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಕುಮಾರ ಡೊಂಗರೆ, ಬಹುಜನ ಭಾರತ ಪಕ್ಷದ ಪವನಕುಮಾರ ಮಾಳಗೆ, ಭಾರತೀಯ ಜವಾನ ಕಿಸಾನ್ ಪಕ್ಷದ ಸತ್ಯಪ್ಪ ದಶರಥ ಕಾಳೇಲಿ, ಪಕ್ಷೇತರ ಅಭ್ಯರ್ಥಿಗಳಾದ ಕಾಡಯ್ಯ ಹಿರೇಮಠ, ಕಾಶಿನಾಥ ಕುರಣಿ, ಗಜಾನನ ಪೂಜಾರಿ, ಜಿತೇಂದ್ರ ನೇರ್ಲೆ, ಭೀಮಸೇನಸನದಿ, ಮಗದುಮ್ಮ ಇಸ್ಮಾಯಿಲ್ ಮಗದುಮ್ಮ, ಮಹೇಶ ಅಶೋಕ, ಮೋಹನ ಮೊಟನ್ನವರ, ಯಾಸೀನ್ ಸಿರಾಜುದ್ದಿನ್ ಪಟಕಿ, ರಾಜು ವಿಜಯ ಸೊಲ್ಲಾಪುರೆ, ವಿಲಾಸ ಮಣ್ಣೂರ, ಶಂಭು ಕಲ್ಲೋಳಿಕರ, ಶ್ರೀಣಿಕ ಅಣ್ಣಾಸಾಹೇಬ ಜಂಗಟೆ, ಸಮ್ಮೇದ್ ಸರದಾರ ವರ್ಧಮಾನೆ ನಾಮಪತ್ರಗಳು ಕ್ರಮಬದ್ಧವಾಗಿವೆ.

ಬೆಳಗಾವಿಯಲ್ಲಿ ಕ್ರಮಬದ್ಧನಾಮಪತ್ರ ವಿವರ: ಬಹುಜನ ಸಮಾಜ ಪಾರ್ಟಿಯಿಂದ ಅಶೋಕ ಅಪ್ಪುಗೋಳ, ಭಾರತೀಯ ಜನತಾ ಪಾರ್ಟಿಯಿಂದ ಜಗದೀಶ ಶೆಟ್ಟರ್, ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ಪಕ್ಷದ ಮೃಣಾಲ್‌ ಹೆಬ್ಬಾಳಕರ, ಕರ್ನಾಟಕ ರಾಷ್ಟ್ರ ಸಮಿತಿಯಿಂದ ಬಸಪ್ಪ ಗುರುಸಿದ್ದ ಕುಂಬಾರ, ಉತ್ತಮ ಪ್ರಜಾಕೀಯ ಪಕ್ಷದಿಂದ ಮಲ್ಲಪ್ಪ ಚೌಗಲಾ, ಸೋಷಿಯಲಿಸ್ಟ್ ಯುನಿಟ್ ಸೆಂಟರ್ ಆಫ್ ಇಂಡಿಯಾ ಎಸ್‌ಯುಸಿಐನಿಂದ ಲಕ್ಷ್ಮಣ ಜಡಗಣ್ಣವರ, ಪಕ್ಷೇತರರಾಗಿ ಅಶ್ಪಾಕ್ ಅಹ್ಮದ ಉಸ್ತಾದ, ಅಶೋಕ ಹಣಜಿ, ಈಶ್ವರ ನಾಗಪ್ಪ ಚಿಕ್ಕನರಗುಂದ, ದೊಡ್ಡಪ್ಪ ಈರಪ್ಪ ದೊಡಮನಿ, ನಿತಿನ ಅಶೋಕ ಮಾಡಗುಡ, ಪುಂಡಲೀಕ ಇಟ್ನಾಳ, ಭಾರತಿ ಬಾಳಪ್ಪ ನೀರಲಕೇರಿ, ಮಗದುಮ್ಮ ಇಸ್ಮಾಲ್ ಮಗದುಮ್ಮ, ಮಹಾದೇವ ಪಾಟೀಲ, ಮಹಾಂತೇಶ ಗೌಡರ, ಮಹಾಂತೇಶ ನಿರ್ವಾಣಿ, ರವಿ ಪಡಸಲಗಿ, ವಿಜಯ ಮೇತ್ರಾಣಿ, ಸಾಗರ ಪಾಟೀಲ, ಹನಮಂತನಾಗನೂರ ಅವರ ನಾಮಪತ್ರ ಕ್ರಮಬದ್ಧವಾಗಿವೆ. ಏ. 22ರಂದು ಮಧ್ಯಾಹ್ನ 3 ಗಂಟೆವರೆಗೆ ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿದ್ದು, ಮೇ 7ರಂದು ಮತದಾನ ನಡೆಯಲಿದೆ ಎಂದು ಎಂದು ಜಿಲ್ಲಾ ಚುನಾವಣಾಧಿಕಾರಿ ನಿತೇಶ್ ಪಾಟೀಲ ತಿಳಿಸಿದ್ದಾರೆ.