Join The Telegram | Join The WhatsApp |
ಬೆಳಗಾವಿ :
ಬೆಳಗಾವಿಯ ಅನಗೋಳದ ಬೆಮ್ಕೋ ಹೈಡ್ರಾಲಿಕ್ಸ್ ನಿಂದ ನಾಲ್ಕನೇ ರೈಲ್ವೆ ಗೇಟ್ ವರೆಗಿನ ರಸ್ತೆಗೆ ಬಸವರಾಜ ಬೊಮ್ಮಾಯಿ ರಸ್ತೆ ಎಂದು ನಾಮಕರಣ ಮಾಡಲಾಗಿದೆ.
ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ ಅವರು ಬಸವರಾಜ ಬೊಮ್ಮಾಯಿ ಮಾರ್ಗದ ಫಲಕವನ್ನು ಅನಾವರಣಗೊಳಿಸಿದರು. ಸ್ಮಾರ್ಟ್ ಸಿಟಿ ಯೋಜನೆಯಡಿ ಅಭಿವೃದ್ಧಿ ಪಡಿಸಲಾಗಿರುವ ಈ ರಸ್ತೆಗೆ ನಾಮಕರಣ ಮಾಡುವುದರ ಜೊತೆಗೆ ಅಲಂಕೃತ ವಿದ್ಯುತ್ ದ್ವೀಪಗಳಿಗೆ ಚಾಲನೆ ನೀಡಲಾಯಿತು. ಶಾಸಕ ಅಭಯ ಪಾಟೀಲ ಸ್ಮಾರ್ಟ್ ಸಿಟಿ ಯೋಜನೆ ಕಾಮಗಾರಿಗಳ ಕುರಿತು ಮಾಹಿತಿ ನೀಡಿದರು.
Join The Telegram | Join The WhatsApp |