ಬೆಳಗಾವಿ: ನಗರದ ಎಪಿಎಂಸಿ ಪೊಲೀಸರು ಕೆಎಲ್ಇ ಆಸ್ಪತ್ರೆ ರಸ್ತೆಯಲ್ಲಿ ಸಂಶಯಾಸ್ಪದವಾಗಿ ತಿರಗಾಡುತ್ತಿದ್ದ ರಾಮನಗರ ಗ್ಯಾಂಗ್ ವಾಡಿ ಜ್ಯೋತಿ ನಗರದ ನಿವಾಸಿ ಹೇಮಂತ ಶಿವಾಜಿ ಜಾಂಗಳೆ ಎಂಬಾತನನ್ನು ಬಂಧಿಸಿ ಒಟ್ಟು ಎಂಟು ಬೈಕ್ ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಎಪಿಎಂಸಿ ಮತ್ತು ಸಂಕೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಒಂದೊಂದು ಬೈಕ್ ಪತ್ತೆಯಾಗಿದ್ದು ಬಾಕಿ ಉಳಿದ ಆರು ಬೈಕ್ ಗಳ ಮಾಲೀಕರ ಪತ್ತೆ ಕಾರ್ಯ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.