ಬೆಳಗಾವಿ: ಅಕ್ರಮವಾಗಿ ಹಣ ಸಾಗಾಟ ಮಾಡಲು ವಾಹನದ ಕ್ಯಾಬಿನ್ ಮಾರ್ಪಾಡು ಮಾಡಿ ಹಣ ಸಾಗಿಸುತ್ತಿದ್ದ ಇಬ್ಬರನ್ನು ಬಂಧಿಸುವಲ್ಲಿ ಬೆಳಗಾವಿ ಪೊಲೀಸರು ಯಶಸ್ವಿಯಾಗಿದ್ದಾರೆ. ಶುಕ್ರವಾರದಂದು ಸಂಜೆ ಸಾಂಗ್ಲಿಯಿಂದ ಹುಬ್ಬಳ್ಳಿ ಕಡೆ ಅಶೋಕ ಲೈಲ್ಯಾಂಡ್ ಗೂಡ್ಸ್ ವಾಹನದಲ್ಲಿ ಅಕ್ರಮವಾಗಿ ಯಾವುದೇ ಸೂಕ್ತ ದಾಖಲೆ ಇಲ್ಲದೆ ಹಣ ಸಾಗಾಟ ಮಾಡುತ್ತಿದ್ದ ಮಾಹಿತಿ ಮೇರೆಗೆ ಬೆಳಗಾವಿ ಮಾಳ ಮಾರುತಿ ಪೊಲೀಸರು ವಾಹನ ತಡೆದು ವಿಚಾರಣೆ ನಡೆಸಿದರು.
ಇದರಲ್ಲಿ ಭಾಗಿಯಾದ ಇಬ್ಬರನ್ನು ವಶಕ್ಕೆ ಪಡೆದು ಈಗ ಹಣದ ಮೂಲ ಹಾಗೂ ಏಕೆ ಹಣ ಸಾಗಾಟ ಮಾಡಲಾಗುತ್ತಿತ್ತು ಎಂಬ ವಿಚಾರಣೆ ನಡೆಸುತ್ತಿದ್ದಾರೆ. ಸಾಂಗ್ಲಿಯ ಸಚಿನ್ ಮೇನಕುದಳಿ ಮತ್ತು ಮಾರುತಿ ಮಾರಗುಡಿ ಅವರನ್ನು ಬಂಧಿಸಿರುವ ಪೊಲೀಸರು ಅವರಿಂದ ಒಟ್ಟು ಒಟ್ಟು 2,73, 27,500 ₹ ಹಣವನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಹಣವನ್ನು ಅಕ್ರಮವಾಗಿ ಸಾಗಾಟ ಮಾಡಲು ವಾಹನದ ಕ್ಯಾಬಿನ್ ನಲ್ಲಿ ಮಾರ್ಪಾಡು ಮಾಡಿರುವುದು ಪೊಲೀಸರಿಗೆ ವಿಚಾರಣೆ ವೇಳೆ ಗೊತ್ತಾಗಿದೆ. ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ವಶಪಡಿಸಿಕೊಂಡಿರುವ ಹಣದ ಬಗ್ಗೆ ಪೊಲೀಸರು ಕೂಲಂಕಶ ತನಿಖೆ ನಡೆಸುತ್ತಿದ್ದಾರೆ.
ಮಹಾರಾಷ್ಟ್ರ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಇದೀಗ ಉಭಯ ರಾಜ್ಯಗಳ ಪೊಲೀಸರು ಹಣ ಸಾಗಾಟದ ಬಗ್ಗೆ ಹದ್ದಿನ ಕಣ್ಣು ಇಟ್ಟಿದ್ದಾರೆ.