Join The Telegram | Join The WhatsApp |
ಮಟ್ಕಾ, ಜೂಜಾಟ, ಗಾಂಜಾ ಮಾರಾಟ ಮಾಡುವವರ ಬಗ್ಗೆ ಮಾಹಿತಿ ಸಿಕ್ಕಲ್ಲಿ ಹತ್ತಿರದ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಬೆಳಗಾವಿ ಪೊಲೀಸರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
ಬೆಳಗಾವಿ :
ಬೆಳಗಾವಿ ನಗರದಲ್ಲಿ ಅಕ್ರಮ ಚಟುವಟಿಕೆ ಕೈಗೊಂಡ ಆರೋಪದ ಮೇರೆಗೆ ಮಾರ್ಕೆಟ್ ಪೊಲೀಸ್ ಠಾಣೆಯ ಎಸಿಪಿ ನಾರಾಯಣ ಬರಮನಿ ಅವರ ಶಿಫಾರಸ್ಸಿನ ಮೇರೆಗೆ ಡಿಸಿಪಿ ರವೀಂದ್ರ ಗಡಾದಿ ಅವರು ಐವರನ್ನು ಗಡಿಪಾರು ಮಾಡಿ ಆದೇಶ ಹೊರಡಿಸಿದ್ದಾರೆ.
ಮಾರ್ಕೆಟ್ ಪೊಲೀಸ್ ಠಾಣಾ ವ್ಯಾಪ್ತಿಯ ಖಂಜರಗಲ್ಲಿಯ ಮಹಮದ್ ರಫಿ ಮೋದಿನಸಾಬ ತಹಸೀಲ್ದಾರ(68), ಖಂಜರ್ ಗಲ್ಲಿಯ ನಿವಾಸಿ ಇಜಾರ ಅಹಮದ್ ಮಹಮದ್ ಇಸಾಕ್ ನೇಸರಿಕರ(48), ಮಾಳ ಮಾರುತಿ ಪೊಲೀಸ್ ಠಾಣೆ ವ್ಯಾಪ್ತಿಯ ಗ್ಯಾಂಗ್ ವಾಡಿಯ ಜಾನಿ ಜಯಪಾಲ ಲೊಂಡೆ(36), ಕಣಬರ್ಗಿ ಪಾಟೀಲ ಗಲ್ಲಿಯ ಬೈರ ಗೌಡ ಜ್ಯೋತಿಬಾ ಪಾಟೀಲ(45) ಮತ್ತು ಶಹಾಪುರ ಪೊಲೀಸ್ ಠಾಣೆ ವ್ಯಾಪ್ತಿಯ ಖಡೆ ಬಜಾರ್ ನಿತಿನ್ ಪಾಂಡುರಂಗ ಪೇಡ್ನೇಕರ/ಪೆರನೇಕರ ಅವರನ್ನು ಬಳ್ಳಾರಿ, ಕೊಪ್ಪಳ, ವಿಜಯನಗರ ಜಿಲ್ಲೆಗಳಿಗೆ ಗಡಿಪಾರು ಮಾಡಿ ಪೊಲೀಸರು ಆದೇಶ ಹೊರಡಿಸಿದ್ದಾರೆ.
Join The Telegram | Join The WhatsApp |