ಬೆಳಗಾವಿ :
ಕೆ ಎಲ್ ಇ ಸಂಸ್ಥೆಯ ರಾಜಾ ಲಖಮಗೌಡ ವಿಜ್ಞಾನ ಮಹಾವಿದ್ಯಾಲಯ ಮತ್ತು ಆಂತರಿಕ ಗುಣಮಟ್ಟ ಭರವಸೆ ಕೋಶ ,ಐಐಸಿ ಹಾಗೂ ರಸಾಯನಶಾಸ್ತ್ರ ಸಂಘದ ಸಹಯೋಗದ ಆಶ್ರಯದಲ್ಲಿ ಆಯೋಜಿಸಿದ್ದ “ರಾಷ್ಟ್ರೀಯ ವಿಜ್ಞಾನ ದಿನಾಚರಣೆ” ನಿಮಿತ್ತ “ವಿಕಸಿತ ಭಾರತಗಾಗಿ ಸ್ಥಳೀಯ ತಂತ್ರಜ್ಞಾನ ” ಎಂಬ ವಿಷಯ ಕುರಿತು ವಿಶೇಷ ಉಪನ್ಯಾಸ ವನ್ನು ದಿನಾಂಕ 28/2/2024 ರಂದು ಬೆಳಿಗ್ಗೆ 11 ಗಂಟೆಗೆ ಸರ್ ಸಿ ವಿ ರಾಮನ್ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು.

ಮುಖ್ಯ ಅತಿಥಿಗಳಾಗಿ ಮುಂಬೈನ ಟಾಟಾ ಸಮೂಹದ ಉತ್ಪಾದನಾ ಘಟಕದ ಉಪಾಧ್ಯಕ್ಷ ಡಾ. ರಾಜಶೇಖರ ಎಸ್. ಕಿನ್ನವರ ಉದ್ಘಾಟಿಸಿ ಮಾತನಾಡಿ, ಇಂದಿನ ವಿಜ್ಞಾನ ವಿದ್ಯಾರ್ಥಿಗಳು ವಿಜ್ಞಾನ ವಿಷಯದ ಸಮಗ್ರ ಅಧ್ಯಯನ ಮಾಡಬೇಕು. ಆಸಕ್ತಿಯಿಂದ ಕಲಿಕೆಯಲ್ಲಿ ಓದುವ ಮೂಲಕ ಹೊಸ ಸಂಶೋಧನೆಯ ಮಾಡಬೇಕು. ಭಾರತದಲ್ಲಿ ಟಾಟಾ ಸಂಸ್ಥೆಯ ಪ್ರತಿಷ್ಠಿತವಾದದು. ಈ ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸಿದರೆ ಬದುಕುವ ವಿವಿಧ ಕೌಶಲಗಳನು ಪಡೆಯಬಹುದು. ಸ್ಥಳೀಯ ತಂತ್ರಜ್ಞಾನ ವಸ್ತುಗಳು ತಯಾರಿ ಮಾಡಿದರೆ ಭಾರತ ದೇಶವು ಬಲಿಷ್ಠವಾಗುತ್ತದೆ. ಆಧುನಿಕ ಕಾಲದಲ್ಲಿ ವಿಷಕಾರಿಕ ವಸ್ತುಗಳು ಬಳಕೆ ಮಾಡಿದರೆ ವಾತಾವರಣ ಬದಲಾವಣೆಯಾಗುತದೆ. ನಂತರ ಮಾನವನ ಮೇಲೆ ಪರಿಣಾಮ ಬೀರುತ್ತದೆ. ಇಂದಿನ ಕಾಲದಲ್ಲಿ ನೈಸರ್ಗಿಕ ಸಂಪನ್ಮೂಲ ರಕ್ಷಣೆಯ ಅಗತ್ಯವಿದೆ.ಸ್ಥಳೀಯ ತಂತ್ರಜ್ಞಾನ ಬಳಕೆ ಮಾಡಿದರೆ ಜಗತ್ತಿನಲ್ಲಿ ದೇಶವು ವಿಕಾಸ ಭಾರತ ವಾಗಲಿಕೆ ಸಾಧ್ಯವಾಗುತ್ತದೆಂದು ಕರೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಮಹಾವಿದ್ಯಾಲಯದ ಪ್ರಾಚಾರ್ಯೆ ಡಾ. ಜೆ ಎಸ್ ಕವಳೇಕರ ಮಾತನಾಡಿ, ಸರ್ ಸಿ.ವಿ. ರಾಮನ್ ರ ಜೀವನ ಮತ್ತು ಸಾಧನೆ ಅಧ್ಯಯನ ಮಾಡಬೇಕು. ಮುಂದುವರೆದ ದೇಶವಾಗಬೇಕಾದರೆ ಪ್ರತಿಯೊಬ್ಬರು ಸ್ಥಳೀಯ ತಂತ್ರಜ್ಞಾನ ಬಳಕೆ ಮಾಡಿಕೊಳ್ಳುಬೇಕು. ಸರ್ ಸಿ ವಿ ರಾಮನ್ ರ ಸಿದ್ಧಾಂತಗಳು ತಿಳಿದುಕೊಳ್ಳುಬೇಕೆಂದು ಹೇಳಿದರು.

ಸೌಮ್ಯ ಮತ್ತು ಸಂಗಡಿಗರು ಪ್ರಾರ್ಥಿಸಿದರು. ಡಾ. ಬಿ.ಜಿ. ಬೇವಿನಕಟ್ಟಿ ಸ್ವಾಗತಿಸಿದರು. ಪ್ರೊ.ಎಸ್. ಡಿ.ಗೋರಿನಾಯಕ
ಪರಿಚಯಿಸಿದರು. ಪವಿತ್ರಾ ಸಮಾಜೆ ವಂದಿಸಿದರು. ಸಮೃದ್ಧಿ ಬರವೆ ಕಾರ್ಯಕ್ರಮ ನಡೆಸಿಕೊಟ್ಟರು. ಕಾರ್ಯಕ್ರಮದಲ್ಲಿ ಕಾಲೇಜಿನ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.