ಬೆಳಗಾವಿ : ಬೆಳಗಾವಿ ಯಳ್ಳೂರು ರಸ್ತೆಯ ಶ್ರೀ ಅನ್ನಪೂರ್ಣೇಶ್ವರಿ ನಗರದಲ್ಲಿರುವ ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನದ 11 ನೇ ವರ್ಷಾವಧಿ ಸೇವೆ ಶುಕ್ರವಾರ ಸಂಪನ್ನಗೊಂಡಿತು.

ಬುಧವಾರ ಶ್ರೀ ಅನ್ನಪೂರ್ಣೇಶ್ವರಿ ಸಹಿತ ಪರಿವಾರ ದೇವರಿಗೆ ಕಲಶಾಭಿಷೇಕ, ನಾಗದೇವರ ಬಿಂಬ ಪ್ರತಿಷ್ಠಾಪನೆ, ಕಲಶಾಭಿಷೇಕ ಮಹಾಪೂಜೆ, ಮಧ್ಯಾಹ್ನ ಮಹಾಪೂಜೆ, ಪ್ರಸನ್ನ ಪೂಜೆ, ಪ್ರಸಾದ, ರಂಗ ಪೂಜೆ ಶ್ರೀ ದೇವಿಯ ಪಲ್ಲಕ್ಕಿ- ಮೆರವಣಿಗೆ, ದೀಪೋತ್ಸವ ನಡೆಯಿತು. ಗುರುವಾರ ಸಂಪ್ರೋಕ್ಷಣೆ, ಅನ್ನಪೂರ್ಣೇಶ್ವರಿ ಯಾಗ, ಸುಬ್ರಮಣ್ಯ ದೇವರಿಗೆ ಆಶ್ಲೇಷ ಬಲಿ, ಮಹಾ ಚಂಡಿಕಾ ಯಾಗ, ಸಂಜೆ ಕೀರ್ತನಾಕಾರರಿಂದ ಕೀರ್ತನೆ, ವ್ಯಾಖ್ಯಾನ ನಡೆಯಿತು.
ಶುಕ್ರವಾರ ದೇವಿಗೆ ವಿಶೇಷ ಅಲಂಕಾರ, ಪೂಜಾರಾಧನೆ, ಭಜನಾ ಮಂಡಳಿಯಿಂದ ಭಜನೆ, ಮಹಾಪ್ರಸಾದ ನಡೆಯಿತು.

ವರ್ಷಾವಧಿ ಸೇವೆಯ ಪೂಜಾ ಕಾರ್ಯಕ್ರಮಗಳು ಉಡುಪಿ ಉಚ್ಚಿಲದ ವಿಶ್ವನಾಥ ಜೋಯಿಸರ ನೇತೃತ್ವದಲ್ಲಿ ನೆರವೇರಿತು.

ಮೂರು ದಿನಗಳ ಕಾಲ ನಡೆದ ವಾರ್ಷಿಕೋತ್ಸವದ ಈ ಧಾರ್ಮಿಕ ಕಾರ್ಯಕ್ರಮಕ್ಕೆ ಬೆಳಗಾವಿ ನಗರದ ಸಹಸ್ರಾರು ಭಕ್ತರು ಸಾಕ್ಷಿಯಾದರು.