ಬೆಳಗಾವಿ : ಕನ್ನಡ ಸಾಹಿತ್ಯ ಭವನ ವಿಶ್ವಸ್ಥ ಮಂಡಳಿ, ಜಿಲ್ಲಾ ಲೇಖಕಿಯರ ಸಂಘ, ಬಿ.ಎ. ಸನದಿ ಸಾಂಸ್ಕೃತಿಕ ಪ್ರತಿಷ್ಠಾನ, ಕವಿ ಎಸ್.ಡಿ. ಇಂಚಲ ಮತ್ತು ಉಳವೀಶ ಹುಲೆಪ್ಪನವರಮಠ ಸ್ಮಾರಕ ಪ್ರತಿಷ್ಠಾನಗಳ ವತಿಯಿಂದ ಸಾಹಿತಿ ಬಿ.ಎಸ್. ಗವಿಮಠ ಅವರ ಬೆಳಗಾವಿ ಸಾವಿರದ ನೆನಪುಗಳು ಸಂಪಾದಿತ ಕೃತಿ ಹಾಗೂ ಕೂಡಲಸಂಗಮ ಸ್ವತಂತ್ರ ಕೃತಿ ಲೋಕಾರ್ಪಣೆ ಮತ್ತು ಅಭಿನಂದನಾ ಸಮಾರಂಭವನ್ನು ಜ.5 ರಂದು ಬೆಳಗ್ಗೆ 11 ಕ್ಕೆ ನಗರದ ಚನ್ನಮ್ಮ ವೃತ್ತದ ಕನ್ನಡ ಸಾಹಿತ್ಯ ಭವನದಲ್ಲಿ ಏರ್ಪಡಿಸಲಾಗಿದೆ.
ಖ್ಯಾತ ನ್ಯಾಯವಾದಿ ಎಸ್.ಎಂ. ಕುಲಕರ್ಣಿ ಮುಖ್ಯ ಅತಿಥಿಯಾಗಿ ಆಗಮಿಸುವರು. ಲೇಖಕಿ ಡಾ.ಗುರುದೇವಿ ಹುಲೆಪ್ಪನವರಮಠ ಮತ್ತು ಎ.ಎ.ಸನದಿ ಕೃತಿ ಕುರಿತು ಮಾತನಾಡುವರು.
ಗಡಿನಾಡ ಚೇತನ ಪ್ರಶಸ್ತಿ ಪುರಸ್ಕೃತ ಬಿ.ಎಸ್. ಗವಿಮಠ ಮತ್ತು ಟಿ ಎಸ್ ಆರ್ ಪ್ರಶಸ್ತಿ ಪುರಸ್ಕೃತ ಪತ್ರಕರ್ತ ಡಾ.ಸರಜೂ ಕಾಟ್ಕರ್ ಅವರನ್ನು ಅಭಿನಂದಿಸಲಾಗುವುದು. ಖ್ಯಾತ ವೈದ್ಯ ಡಾ.ಎಚ್.ಬಿ.ರಾಜಶೇಖರ ಅಧ್ಯಕ್ಷತೆ ವಹಿಸುವರು. ಡಾ. ರಾಮಕೃಷ್ಣ ಮರಾಠೆ, ಅಶೋಕ ಚಂದರಗಿ, ಶಿರೀಷ ಜೋಶಿ ಅವರು ಅಭಿನಂದನಾ ಪರ ನುಡಿ ಆಡಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.