ಬೆಳಗಾವಿ : ವೈಭವನಗರ ಅರ್ಬನ್ ಕೋ ಅಪ್ ಕ್ರೆಡಿಟ್ ಸೊಸೈಟಿಯ 22 ನೇ ವಾರ್ಷಿಕ ಮಹಾಸಭೆ ರವಿವಾರ ದಿ. 22.09.2024 ರಂದು ನಗರದ ರಾಣಿ ಚನ್ನಮ್ಮ ಫಾರ್ಮಸಿ ಕಾಲೇಜಿನ ಸಭಾಂಗಣದಲ್ಲಿ ನೇರವೇರಿತು. ಉದ್ಘಾಟನೆ ನೆರವೇರಿಸಿ ಮಾತನಾಡಿದ ಸೊಸೈಟಿ ಅಧ್ಯಕ್ಷ ಮೋಹನ ಪಾಟೀಲ, ಸಂಘದ ಸಂಸ್ಥಾಪಕರಾದ ಎಸ್.ವಿ. ಪಾಟೀಲರನ್ನು ಸ್ಮರಿಸುತ್ತ, ಹಿಂದಿನ ಅಧ್ಯಕ್ಷ ಎಸ್.ವಿ. ನಿರಾಕಾರಿಯವರ ಸೇವೆಯನ್ನು ಶ್ಲಾಘಿಸುತ್ತ ಸಂಘದ ಪ್ರಗತಿಗೆ ಮೆಚ್ಚುಗೆ ಸೂಚಿಸಿದರು.
ಇನ್ನು ಮುಂದೆಯೂ ಎಲ್ಲರೂ ಸಂಸ್ಥೆ ಇನ್ನೂ ಎತ್ತರಕ್ಕೆ ಬೆಳೆಯಲು ಸಹಾಯ ಸಹಕಾರ ನೀಡಲು ಕೋರಿದರು. ಕಾರ್ಯದರ್ಶಿ ವಿಶಾಲಾಕ್ಷಿ ಸಂಘದ ವಾರ್ಷಿಕ ವರದಿ ಮಂಡಿಸಿದರು. ಕಾಲೇಜಿನ ಆಡಳಿತಧಿಕಾರಿ ಶಂಕರ ಕಸರಡ್ಡಿ ಮತ್ತು ಕೊಡುಗೈ ದಾನಿ ದಯಾನಂದ ಕಿನಗಿ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಎಲ್ಲ ನಿರ್ದೇಶಕರು ಉಪಸ್ಥಿತರಿದ್ದರು. ನಿರ್ದೇಶಕ ಆರ್. ಬಿ. ಪಾಟೀಲ ವಂದಿಸಿದರು.