ಬೆಳ್ವೆ: ಮಕ್ಕಳಿಗೆ ಗುಣ ಮಟ್ಟದ ಶಿಕ್ಷಣಕ್ಕೆ ಆಧ್ಯತೆ ನೀಡಿ ಪ್ರೋತ್ಸಾಹಿಸಿದಾಗ ಉತ್ತಮ ಜೀವನವನ್ನು ರೂಪಿಸಿಕೊಳ್ಳಲು ಸಾಧ್ಯವಿದೆ. ಸಮಾಜದ ಒಳಿತಿಗಾಗಿ ಕೊಡುಗೆಗಳನ್ನು ನೀಡಿದ ದಾನಿಗಳನ್ನು ಗೌರವಿಸುವುದು ಶ್ರೇಷ್ಠ ಕಾರ್ಯವಾಗಿದೆ ಎಂದು ಬೆಳ್ವೆ ಹಿದಾಯತುಲ್ ಉಲೂಮ್ ಅರಬಿ ಮದ್ರಸ ಅಧ್ಯಕ್ಷ ಮುಸ್ತಾಕ್ ಅಹಮ್ಮದ್ ಬೆಳ್ವೆ ಹೇಳಿದರು.
ಅವರು ಬೆಳ್ವೆ ಹಿದಾಯತುಲ್ ಉಲೂಮ್ ಅರಬಿ ಮದ್ರಸ ವಾರ್ಷಿಕೋತ್ಸವ (ಜಲ್ಸ್)-2025 ಕಾರ್ಯಕ್ರಮದಲ್ಲಿ ಇತ್ತೀಚೆಗೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮೌಲನ್ ಮೊಹಮ್ಮದ್ ರಫೀಕ್.ಮೌಲನ್ ಆಸೀಫ್ ನದ್ವಿ, ಬೆಳ್ವೆ ಜುಮ್ಮಾ ಮಸೀದಿ ಅಧ್ಯಕ್ಷ ಅಹಮ್ಮದ್ ಬ್ಯಾರಿ, ಉಪಾಧ್ಯಕ್ಷ ಅಬ್ದುಲ್ ಸಾಹೇಬ್, ಕಾರ್ಯದರ್ಶಿ ಇಸ್ಮಾಯಿಲ್ ಬ್ಯಾರಿ,ಬೆಳ್ವೆ ಮದ್ರಸ್ ಸ್ಥಾಪಕ
ಕಾರ್ಯದರ್ಶಿ ಬಿ.ಕೆ.ಶಬ್ಬೀರ್ ಸಾಹೇಬ್, ಬೆಳ್ವೆ ಇಸ್ಲಾಮಿಕ್ ಯುತ್ ಫೆಡರೇಶನ್ ಅಧ್ಯಕ್ಷ ಮೊಹಮ್ಮದ್
ನಝೀರ್, ವಾರ್ಷಿಕೋತ್ಸವ ಸಮಿತಿ ಸದಸ್ಯ ಅನ್ವರ್ ಹುಸೇನ್, ಶಾಜಾದ, ಫಝೀಲ್. ನಿಯಾನ್, ರಯಾನ್, ನೌಫಲ್ ಉಪಸ್ಥಿತರಿದ್ದರು.ಬೆಳ್ವೆ ಜುಮ್ಮಾ ಮಸೀದಿಗೆ ಭೂಮಿ ವಕ್ಫ್ ನೀಡಿದ ದಾನಿ ಗೌಸ್ ಸಾಹೇಬ್ಬೆಳ್ವೆ (ಬಾಪು ಸಾಹೇಬ್),
ಮದ್ರಸ್ ಅಭಿವೃದ್ಧಿ ದಾನಿ ಅಯೂಬ್ ಬ್ಯಾರಿ
ಅಲ್ಬಾಡಿ ಇವರಿಗೆ ಸನ್ಮಾನ, ಅಲ್ಬಾಡಿ ಶ್ರೀಲಕ್ಷ್ಮೀ ಶಾಮಿಯಾನ ಮತ್ತು ಲೈಟಿಂಗ್ಸ್ ಉದ್ಯಮಿ ದಿ.ಶಂಕರ ನಾಯ್ಕ ಸೇವೆಯ ಸ್ಮರಣಾರ್ಥ ಮರಣೋತ್ತರ ಗೌರವವನ್ನು ಸಹೋದರ ಕುಂದಾಪುರ
ಲೋಕೋಪಯೋಗಿ ಇಲಾಖೆ ಅಭಿಯಂತರ ಮಹಾಬಲ
ನಾಯ್ಕ ಅಲ್ಬಾಡಿ ಇವರಿಗೆ ಗೌರವ ಸಮರ್ಪಣೆ,ಪ್ರತಿಭಾ
ಪುರಸ್ಕಾರ,ಬಹುಮಾನ ವಿತರಣೆ, ಮದ್ರಸ ಮಕ್ಕಳಿಂದ ವಾರ್ಷಿಕೋತ್ಸವದ ಪ್ರಯುಕ್ತ ವಿವಿಧ ಕಾರ್ಯಕ್ರಮಗಳು ನಡೆಯಿತು.ಅರ್ಫಾತ್ ಸ್ವಾಗತಿಸಿದರು. ಆಸೀಫ್ ಅಲ್ಬಾಡಿ ವರದಿ ವಾಚಿಸಿದರು. ರಝೀನ್ ಬೆಳ್ವೆ ಸನ್ಮಾನ ಪತ್ರ ವಾಚಿಸಿದರು, ಮೊಹಮ್ಮದ್ ಜಾಸೀಮ್,
ಮೊಹಮ್ಮದ್ ರಬೀ, ಮೊಹಮ್ಮದ್ ಫಾರೀಶ್ ಬಹುಮಾನ ಪಟ್ಟಿ ವಾಚಿಸಿದರು.ಮೌಲನ್ ಮೊಹಮ್ಮದ್ ರಫೀಕ್ ವಂದಿಸಿದರು.