ಗೋವಾ:
39 ವರ್ಷದ ಬೆಂಗಳೂರು ಸ್ಟಾರ್ಟ್‌ಅಪ್ ಸಂಸ್ಥಾಪಕಿಯೊಬ್ಬಳು ಗೋವಾದಲ್ಲಿ ನಡೆದ ಆರೋಪಿತ ಪ್ರಕರಣದಲ್ಲಿ ತನ್ನ ನಾಲ್ಕು ವರ್ಷದ ಮಗನನ್ನು ಹತ್ಯೆಗೈದಿದ್ದಾರೆ ಮತ್ತು ಸಿಕ್ಕಿಬೀಳುವ ಮೊದಲು ಶವದೊಂದಿಗೆ ಕರ್ನಾಟಕಕ್ಕೆ ಪ್ರಯಾಣಿಸಿದ್ದಾಳೆ.
ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಸ್ಟಾರ್ಟ್‌ಅಪ್ ಮೈಂಡ್‌ಫುಲ್ ಎಐ ಲ್ಯಾಬ್‌ನ ಸಹ-ಸ್ಥಾಪಕ ಸುಚನಾ ಸೇಠ್ ಎಂಬವಳನ್ನು ಸೋಮವಾರ ಕರ್ನಾಟಕದ ಚಿತ್ರದುರ್ಗದಲ್ಲಿ ತನ್ನ ಮಗನ ಶವವನ್ನು ಬ್ಯಾಗ್‌ನಲ್ಲಿ ಇರಿಸಿಕೊಂಡು ಒಯ್ಯುತ್ತಿದ್ದಾಗ ಬಂಧಿಸಲಾಯಿತು. ಉತ್ತರ ಗೋವಾದ ಕ್ಯಾಂಡೋಲಿಮ್‌ನಲ್ಲಿರುವ ಅಪಾರ್ಟ್‌ಮೆಂಟ್‌ನಲ್ಲಿ ಆಕೆ ತನ್ನ ಚಿಕ್ಕ ಮಗನನ್ನು ಕೊಂದಿದ್ದಾಳೆ. ಉದ್ದೇಶ ಇನ್ನೂ ತಿಳಿದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಸುಚನಾ ಸೇಠ್‌ ಶನಿವಾರ ತನ್ನ ಮಗನೊಂದಿಗೆ ಉತ್ತರ ಗೋವಾದ ಕ್ಯಾಂಡೋಲಿಮ್‌ನಲ್ಲಿರುವ ಸೋಲ್ ಬನಿಯನ್ ಗ್ರಾಂಡೆಗೆ ಭೇಟಿ ನೀಡಿದ್ದಳು. ಸೋಮವಾರ, ಅವಳು ರೂಮಿನಿಂದ ಒಬ್ಬಂಟಿಯಾಗಿ ಚೆಕ್‌ ಔಟ್‌ ಮಾಡಿದಳು ಮತ್ತು ಬೆಂಗಳೂರಿಗೆ ಟ್ಯಾಕ್ಸಿ ಬುಕ್‌ ಮಾಡುವಂತೆ ಹೋಟೆಲ್ ಸಿಬ್ಬಂದಿಯನ್ನು ಕೇಳಿದಳು. ವಿಮಾನದಲ್ಲಿ ತೆರಳಿದರೆ ಹಣ ಕಡಿಮೆಯಾಗುತ್ತದೆ ಎಂದು ಹೊಟೇಲ್‌ ಸಿಬ್ಬಂದಿ ಸಲಹೆ ನೀಡಿದರೂ ಟ್ಯಾಕ್ಸಿಯನ್ನೇ ಬುಕ್‌ ಮಾಡುವಂತೆ ಆಕೆ ಒತ್ತಾಯಿಸಿದ್ದಾಳೆ ಎಂದು ಸಿಬ್ಬಂದಿ ತಿಳಿಸಿದ್ದಾರೆ.

ಅವಳು ಹೊರಹೋಗುವಾಗ ಅವಳೊಂದಿಗೆ ಮಗ ಇಲ್ಲದಿರುವುದನ್ನು ಸಿಬ್ಬಂದಿ ಗಮನಿಸಿದ್ದಾರೆ. ಅವಳು ಹೋದ ನಂತರ, ಕೊಠಡಿ ಸಿಬ್ಬಂದಿ ಆಕೆಯ ರೂಮಿನಲ್ಲಿ ರಕ್ತದ ಕಲೆಗಳನ್ನು ಗಮನಿಸಿದರು. ಹೊಟೇಲ್ ಸಿಬ್ಬಂದಿ ತಕ್ಷಣ ವಿಚಾರವನ್ನು ಪೊಲೀಸರಿಗೆ ತಲುಪಿಸಿದ್ದಾರೆ. ಕ್ಯಾಲಂಗುಟ್ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ತಂಡ ಬೆಳಿಗ್ಗೆ 11 ಗಂಟೆಯ ಸುಮಾರಿಗೆ ರಕ್ತದ ಕಲೆಯ ಬಗ್ಗೆ ಮಾಹಿತಿ ಪಡೆದ ನಂತರ ಹೋಟೆಲ್‌ಗೆ ತಲುಪಿ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ಮಾಡಿದ್ದು ಮಗು ಆಕೆಯೊಂದಿಗೆ ಇಲ್ಲದಿರುವುದು ಅದರಲ್ಲಿ ಕಂಡುಬಂದಿದೆ.
ಆಗ ಟ್ಯಾಕ್ಸಿಯಲ್ಲಿ ತೆರಳುತ್ತಿದ್ದ ಸುಚನಾಳಿಗೆ ಕರೆ ಮಾಡಿದ ಪೊಲೀಸರು ಆಕೆಯ ಮಗನ ಬಗ್ಗೆ ವಿಚಾರಿಸಿದ್ದಾರೆ. ಆಕೆ ತನ್ನ ಮಗು ಫಟೋರ್ಡಾದಲ್ಲಿ ತನ್ನ ಸ್ನೇಹಿತೆಯ ಮನೆಯಲ್ಲಿದ್ದಾಳೆಂದು ಸುಳ್ಳು ವಿಳಾಸ ನೀಡಿದ್ದಾಳೆ. ಅನುಮಾನ ಬಂದ ಪೊಲೀಸರು ಆ ವಿಳಾಸ ಪರಿಶೀಲಿಸಿದಾಗ ಅದು ನಕಲಿಯಾಗಿತ್ತು. ಹೀಗಾಗಿ ಇನ್ಸ್‌ಪೆಕ್ಟರ್ ಟ್ಯಾಕ್ಸಿ ಚಾಲಕನಿಗೆ ಮತ್ತೆ ಕರೆ ಮಾಡಿ, ಪ್ರಯಾಣಿಕಳಿಗೆ ಅನುಮಾನ ಬಾರದಂತೆ ಈ ಬಾರಿ ಕೊಂಕಣಿಯಲ್ಲಿ ಮಾತನಾಡಿ, ಹತ್ತಿರದ ಪೊಲೀಸ್ ಠಾಣೆಗೆ ಹೋಗುವಂತೆ ಸೂಚಿಸಿದ್ದಾರೆ.

ಅಷ್ಟರಲ್ಲಾಗಲೇ ಟ್ಯಾಕ್ಸಿ ಚಿತ್ರದುರ್ಗ ಜಿಲ್ಲೆ ಪ್ರವೇಶಿಸಿತ್ತು. ಚಾಲಕ ಸುಚನಾಗೆ ತಿಳಿಯದಂತೆ ಕಾರನ್ನು ಐಮಂಗಲ ಪೊಲೀಸ್ ಠಾಣೆಗೆ ಒಯ್ದಿದ್ದಾನೆ. ಅಲ್ಲಿದ್ದ ಪೊಲೀಸ್ ಅಧಿಕಾರಿ ಕಾರಿನಲ್ಲಿದ್ದ ಬ್ಯಾಗ್‌ ಅನ್ನು ಪರಿಶೀಲಿಸಿದಾಗ ನಾಲ್ಕು ವರ್ಷದ ಮಗುವಿನ ಶವ ಕಂಡು ಬೆಚ್ಚಿಬಿದ್ದಿದ್ದಾರೆ.
ಸೋಮವಾರ ಸಂಜೆಯೇ ಪೊಲೀಸ್ ತಂಡ ಚಿತ್ರದುರ್ಗಕ್ಕೆ ಆಗಮಿಸಿ ಆರೋಪಿ ತಾಯಿಯನ್ನು ಬಂಧಿಸಿ ಗೋವಾಕ್ಕೆ ಕರೆದೊಯ್ದಿದ್ದಾರೆ.
ಮೈಂಡ್‌ಫುಲ್ ಎಐ ಲ್ಯಾಬ್‌ನ ಲಿಂಕ್ಡ್‌ಇನ್ ಪುಟದ ಪ್ರಕಾರ, “2021 ರ ಎಐ ಎಥಿಕ್ಸ್‌ನಲ್ಲಿ 100 ಬ್ರಿಲಿಯಂಟ್ ಮಹಿಳೆಯರ” ಪೈಕಿ ಶ್ರೀಮತಿ ಸೇಥ್ ಅಗ್ರಸ್ಥಾನದಲ್ಲಿದ್ದರು. ಆಕೆಯ ಸ್ವಂತ ಲಿಂಕ್ಡ್‌ಇನ್ ಖಾತೆಯು ಅವಳು ಹಾರ್ವರ್ಡ್ ವಿಶ್ವವಿದ್ಯಾನಿಲಯದ ಬರ್ಕ್‌ಮನ್ ಕ್ಲೈನ್ ಸೆಂಟರ್‌ನಲ್ಲಿ ಸಹವರ್ತಿ ಮತ್ತು ಡೇಟಾ ಸೈನ್ಸ್ ತಂಡಗಳಿಗೆ ಮಾರ್ಗದರ್ಶನ ನೀಡುವಲ್ಲಿ 12 ವರ್ಷಗಳ ಅನುಭವವನ್ನು ಹೊಂದಿರುವ ಡೇಟಾ ವಿಜ್ಞಾನಿ ಮತ್ತು ಸ್ಟಾರ್ಟ್-ಅಪ್‌ಗಳು ಮತ್ತು ಉದ್ಯಮ ಸಂಶೋಧನಾ ಪ್ರಯೋಗಾಲಯಗಳಲ್ಲಿ ಯಂತ್ರ ಕಲಿಕೆಯ ಪರಿಹಾರಗಳನ್ನು ಸ್ಕೇಲಿಂಗ್ ಮಾಡುವುದಾಗಿ ಹೇಳುತ್ತದೆ.