ಬೆಳಗಾವಿ :
ಬೆಂಗಳೂರಿನ ಕ್ರೈಸ್ಟ್ ವಿಶ್ವವಿದ್ಯಾಲಯದಲ್ಲಿ ಜರುಗಿದ ಸಮಾರಂಭದಲ್ಲಿ ಕರ್ನಾಟಕ ಮತ್ತು ಗೋವಾ ಎನ್‍ಸಿಸಿ ನಿರ್ದೇಶನಾಲಯವು 2023-24 ನೇ ಸಾಲಿನ ಅತ್ಯುತ್ತಮ ಎನ್‍ಸಿಸಿ ಘಟಕ ಪ್ರಶಸ್ತಿಯನ್ನು ಲಿಂಗರಾಜ ಕಾಲೇಜಿಗೆ ನೀಡಿ ಗೌರವಿಸಿದೆ.

23-24 ನೇ ಸಾಲಿನಲ್ಲಿ ಕಾಲೇಜಿನ ಎನ್‍ಸಿಸಿ ಘಟಕದ 50 ಕ್ಕೂ ಹೆಚ್ಚು ವಿದ್ಯಾರ್ಥಿಗಳು ರಾಷ್ಟ್ರಮಟ್ಟದಲ್ಲಿ ಜರುಗಿದ ವಿವಿಧ ಶಿಬಿರಗಳಲ್ಲಿ ಆಯ್ಕೆಯಾಗಿ, ಪಾಲ್ಗೊಂಡು ಅದ್ವಿತೀಯ ಸಾಧನೆಯನ್ನು ಮಾಡಿದ್ದಾರೆ.

ರಾಷ್ಟ್ರಮಟ್ಟದಲ್ಲಿ ಪದಕಗಳನ್ನು ಪಡೆದಿದ್ದಾರೆ. ಹಲವು ಎನ್‍ಸಿಸಿ ಕೆಡೆಟ್‍ಗಳು ಅಗ್ನಿವೀರ ಮೊದಲ್ಗೊಂಡು ಶಸಸ್ತ್ರ ಪಡೆಗೆ ಆಯ್ಕೆಯಾಗಿ ರಾಷ್ಟ್ರಸೇವೆಗೆ ತೊಡಗಿದ್ದಾರೆ.

ಇದರೊಂದಿಗೆ ರಕ್ತದಾನ ಶಿಬಿರ, ಸ್ವಚ್ಛತಾ ಅಭಿಯಾನ, ವನಮಹೋತ್ಸವ, ವ್ರದ್ಧಶ್ರಮ ಭೇಟಿ, ಕ್ಯಾನ್ಸರ್, ಏಡ್ಸ್ ತಡೆಗಟ್ಟುವ ನಿಟ್ಟಿನಲ್ಲಿ ಜನಜಾಗೃತಿ ಅಭಿಯಾನಗಳಲ್ಲಿ ನಿರಂತರವಾಗಿ ತೊಡಗಿಸಿಕೊಂಡು ಕಾರ್ಯನಿರ್ವಹಿಸಿದ್ದಾರೆ.

ಹೀಗೆ ತಮ್ಮ ರಚನಾತ್ಮಕ ಹಾಗೂ ಸೃಜನಾತ್ಮಕ ಕಾರ್ಯಗಳಿಂದ ಮಾದರಿಯೆನಿಸಿರುವ ಲಿಂಗರಾಜ ಕಾಲೇಜಿನ ಎನ್‍ಸಿಸಿ ಘಟಕದ ಕೊಡುಗೆಯನ್ನು ಪರಿಶೀಲಿಸಿದ ಕರ್ನಾಟಕ ಮತ್ತು ಗೋವಾ ಎನ್‍ಸಿಸಿ ನಿರ್ದೇಶನಾಲಯ ಲಿಂಗರಾಜ ಕಾಲೇಜಿಗೆ ಅತ್ಯುತ್ತಮ ಎನ್‍ಸಿಸಿ ಘಟಕ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.

ಮಾಜಿ ಮಾಜಿ ಉಪನಿರ್ದೇಶಕ ಏರ್ ಕಮಾಡೋರ್ ಬಿ.ಎಸ್.ಕನ್ವರ್, ಉಸ್ತುವಾರಿ ನಿರ್ದೇಶಕ ಕರ್ನಲ್ ಬಸಂತ್‍ಸಿಂಗ್ ಲಿಂಗರಾಜ ಕಾಲೇಜಿನ ಎನ್‍ಸಿಸಿ ಅಧಿಕಾರಿ ಕ್ಯಾಫ್ಟನ್ ಡಾ.ಮಹೇಶ ಗುರನಗೌಡರ, ಹಿರಿಯ ಪ್ರಾಧ್ಯಾಪಕ ಪ್ರೊ.ಸಿ ಮಲ್ಲಣ್ಣ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದರು.
ಕಾಲೇಜಿನ ಈ ಸಾಧನೆಗೆ ಕೆಎಲ್‍ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ, 26 ಕರ್ನಾಟಕ ಎನ್‍ಸಿಸಿ ಬಟಾಲಿಯನ್ ಕಮಾಂಡರ್ ಕರ್ನಲ್ ಎಸ್.ದರ್ಶನ, ಕರ್ನಲ್ ಶಂಕರ ಯಾದವ್, ಕೆಎಲ್‍ಇ ಜಂಟಿ ಕಾರ್ಯದರ್ಶಿ ಡಾ.ಪ್ರಕಾಶ ಕಡಕೋಳ, ಪ್ರಾಚಾರ್ಯ ಡಾ.ಎಚ್.ಎಸ್.ಮೇಲಿನಮನಿ, ಪಿಯು ಪ್ರಾಚಾರ್ಯ ಗಿರಿಜಾ ಹಿರೇಮಠ, ಸುಬೇದಾರ ಮೇಜರ್ ಕಲ್ಲಪ್ಪ ಪಾಟೀಲ ಹಾಗೂ ಸಿಬ್ಬಂದಿ ವರ್ಗದವರು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.