ಭೋಪಾಲ್: ಗ್ರಾಹಕರು ಅಂಗಡಿಗಳಲ್ಲಿ ತಮ್ಮ ಕ್ಯೂಆರ್ (QR) ಕೋಡ್‌ಗಳನ್ನು ಸ್ಕ್ಯಾನ್ ಮಾಡಿದಾಗ ಮಧ್ಯಪ್ರದೇಶದ ಖಜುರಾಹೊದಲ್ಲಿ ಹಲವಾರು ವ್ಯಾಪಾರದ ಅಂಗಡಿಗಳವರು ಆಘಾತಕ್ಕೊಳಗಾದವು. ಯಾಕೆಂದರೆ ಗ್ರಾಹಕರು ಕ್ಯೂಆರ್ ಕೋಡ್ ಮೂಲಕ ಪಾವತಿಸಿದ ಹಣ ಅವರ ಖಾತೆಗಳಿಗೆ ತಲುಪಲಿಲ್ಲ…! ನಂತರ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ ನಂತರ ವಂಚಕರ ಗುಂಪು ರಾತ್ರೋರಾತ್ರಿ ಆನ್‌ಲೈನ್ ಪಾವತಿ ಸ್ಕ್ಯಾನರ್‌ಗಳ ಕ್ಯೂಆರ್ (QR) ಕೋಡ್ ಬದಲಾಯಿಸುವುದನ್ನು ತೋರಿಸಿದೆ.
ಅಸ್ತಿತ್ವದಲ್ಲಿರುವ ಸ್ಕ್ಯಾನರ್‌ಗಳ ಮೇಲೆ ಗುಂಪು ಹೊಸ ಕ್ಯೂಆರ್ (QR) ಕೋಡ್‌ಗಳನ್ನು ಅಂಟಿಸಿದೆ. ಸುಮಾರು ಅರ್ಧ ಡಜನ್ ಅಂಗಡಿಗಳಿಗೆ ವಂಚಕರ ಗುಂಪು ಈ ರೀತಿ ಮಾಡಿದೆ. ಈ ಕಾರಣದಿಂದಾಗಿ ಹಣ ಪಾವತಿಸಿದ್ದು ಆರೋಪಿಗಳ ಖಾತೆಗಳಿಗೆ ಹೋಗುತ್ತಿದ್ದವು, ವಂಚಕರನ್ನು ಇನ್ನೂ ಪತ್ತೆ ಹಚ್ಚಿಲ್ಲ.
ರಾಜೇಶ ಮೆಡಿಕಲ್ ಸ್ಟೋರ್ಸ್ ಮಾಲೀಕ ಓಂವತಿ ಗುಪ್ತಾ ಈ ಮೋಸವನ್ನು ಪತ್ತೆ ಮಾಡಿದ್ದಾರೆ. ಗ್ರಾಹಕರು ಬೆಳಿಗ್ಗೆ ತನ್ನ ಅಂಗಡಿಯಲ್ಲಿ ಕ್ಯೂಆರ್ ಕೋಡ್ ಮೂಲಕ ಪಾವತಿ ಮಾಡಿದಾಗ, ಲಿಂಕ್ ಮಾಡಿದ ಖಾತೆಯಲ್ಲಿನ ಹೆಸರನ್ನು ಬದಲಾಯಿಸಿದ್ದಕ್ಕೆ ಹಣ ತಮ್ಮ ಖಾತೆಗೆ ಜಮಾ ಆಗುತ್ತಿಲ್ಲ ಎಂದು ಕಂಡುಕೊಂಡ ನಂತರ ಉಳಿದವರಿಗೆ ಈ ಬಗ್ಗೆ ಎಚ್ಚರಿಸಿದ್ದಾರೆ.
ವಂಚನೆಗೆ ಬಲಿಯಾದ ಮತ್ತೊಂದು ವ್ಯಾಪಾರದ ಸ್ಥಳವೆಂದರೆ ಪೆಟ್ರೋಲ್ ಪಂಪ್. ಅನೇಕ ಗ್ರಾಹಕರು ಹಣವನ್ನು ವರ್ಗಾಯಿಸಿದ್ದಾರೆ ಆದರೆ ಅದು ತಮ್ಮ ಪೆಟ್ರೋಲ್ ಪಂಪ್ ಖಾತೆಗೆ ಜಮಾ ಆಗುತ್ತಿಲ್ಲ ಎಂದು ಉದ್ಯೋಗಿಯೊಬ್ಬರು ಹೇಳಿದರು. “ನಾವು ಸ್ಕ್ಯಾನರ್ ಅನ್ನು ಪರಿಶೀಲಿಸಿದ್ದೇವೆ ಮತ್ತು ಹೆಸರು ಚೋಟು ತಿವಾರಿ ಎಂದು ಬರುತ್ತಿತ್ತು. ನಂತರ ನಾವು ಆ ಸ್ಕ್ಯಾನರ್ ಅನ್ನು ತೆಗೆದುಹಾಕಿದ್ದೇವೆ” ಎಂದು ಉದ್ಯೋಗಿ ಹೇಳಿದರು.ವಂಚನೆ ಪ್ರಕರಣಗಳನ್ನು ತನ್ನ ಗಮನಕ್ಕೆ ತರಲಾಗಿದೆ ಆದರೆ ಯಾವುದೇ ವ್ಯಾಪಾರಿ ಯಾವುದೇ ದೂರು ದಾಖಲಿಸಿಲ್ಲ ಎಂದು ಖಜುರಾಹೊ ಪೊಲೀಸ್ ಠಾಣೆ ಪ್ರಭಾರಿ ಅತುಲ್ ದೀಕ್ಷಿತ್ ಹೇಳಿದ್ದಾರೆ. ಈ ಬಗ್ಗೆ ತನಿಖೆ ನಡೆಸಲಾಗುವುದು ಎಂದ ಅವರು, ವಂಚಕರನ್ನು ಶೀಘ್ರದಲ್ಲೇ ಬಂಧಿಸಲಾಗುತ್ತದೆ ಎಂದು ತಿಳಿಸಿದ್ದಾರೆ.
ಕಳೆದ ತಿಂಗಳು ಮಧ್ಯಪ್ರದೇಶ ವಿಧಾನಸಭೆಯ ಚಳಿಗಾಲದ ಅಧಿವೇಶನದಲ್ಲಿ, ಕಾಂಗ್ರೆಸ್ ಶಾಸಕ ಪ್ರತಾಪ ಗ್ರೆವಾಲ್ ಅವರು ಕೇಳಿದ ಪ್ರಶ್ನೆಗೆ ಉತ್ತರವಾಗಿ ಮುಖ್ಯಮಂತ್ರಿ ಮೋಹನ್ ಯಾದವ್ ಅವರು ಹೆಚ್ಚುತ್ತಿರುವ ಸೈಬರ್ ವಂಚನೆಗಳ ಡೇಟಾವನ್ನು ಪ್ರಸ್ತುತಪಡಿಸಿದರು.2024 ರಲ್ಲಿ, “ಡಿಜಿಟಲ್ ಬಂಧನ”ದ ಹೆಸರಿನಲ್ಲಿ ವಂಚನೆಯ 26 ಪ್ರಕರಣಗಳು ವರದಿಯಾಗಿವೆ, ಅಲ್ಲಿ ಸೈಬರ್ ಅಪರಾಧಿಗಳು ಕಾನೂನು ಜಾರಿ ಸಂಸ್ಥೆಗಳ ಹೆಸರು ಹೇಳಿ 12.6 ಕೋಟಿ ರೂ. ಮೋಸ ಮಾಡಿದ್ದಾರೆ. 2023ಕ್ಕೆ ಹೋಲಿಸಿದರೆ ಸೈಬರ್ ಅಪರಾಧದಲ್ಲಿ 130% ಹೆಚ್ಚಳವಾಗಿದೆ.
2024 ರಲ್ಲಿ ಸುಲಿಗೆ ಮಾಡಿದ 12.60 ಕೋಟಿ ರೂ.ಗಳಲ್ಲಿ 72.38 ಲಕ್ಷ (5.74%) ಮಾತ್ರ ವಸೂಲಿ ಮಾಡಲಾಗಿದೆ. 2023 ಮತ್ತು 2024 ರಲ್ಲಿ ಮಧ್ಯಪ್ರದೇಶದ ಜನರು ಸೈಬರ್ ವಂಚನೆಯಿಂದ 150 ಕೋಟಿ ರೂ.ಗಳನ್ನು ಕಳೆದುಕೊಂಡಿದ್ದಾರೆ.