ಮೂಡಲಗಿ: ಕನಕದಾಸರು ಕುಲ,ಜಾತಿಗಳ ಸಂಕೋಲೆಗಳನ್ನು ಕಿತ್ತು, ದೇವರ ದೃಷ್ಟಿಯಲ್ಲಿ ಎಲ್ಲರೂ ಒಂದೇ ಎಂಬ ಸಂದೇಶ ಸಾರಿದ ಅವರ ಸಮ ಸಮಾಜದ ಬೋಧನೆಗಳು, ಆಧ್ಯಾತ್ಮಿಕ ಚಿಂತನೆಗಳು ಸಮಸ್ತ ಮನುಕುಲಕ್ಕೆ ಮಾರ್ಗದರ್ಶಕಗಳಾಗಿವೆ ಎಂದು ಬಸವರಾಜ ಕಡಾಡಿ ಹೇಳಿದರು.
ಸೋಮವಾರ ನ-18 ರಂದು ಕಲ್ಲೋಳಿ ಪಟ್ಟಣದ ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಅವರ ಜನಸಂಪರ್ಕ ಕಾರ್ಯಾಲಯದಲ್ಲಿ ಕನಕದಾಸರ 537ನೇ ಜಯಂತಿಯ ನಿಮಿತ್ಯ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದ ಅವರು
ಕನಕದಾಸರು ಕೀರ್ತನಕಾರರಾಗಿ, ತತ್ವಜ್ಞಾನಿಯಾಗಿ, ದಾರ್ಶನಿಕರಾಗಿ,ಕನ್ನಡನಾಡಿನ ಸಾಂಸ್ಕೃತಿಕ ಪರಂಪರೆಗೆ ಅನನ್ಯ ಕೊಡುಗೆ ನೀಡಿದ್ದಾರೆ ಎಂದರು.ಈ ಸಂದರ್ಭದಲ್ಲಿ ಶ್ರೀ ಮಹಾಲಕ್ಷ್ಮೀ ಸೌಹಾರ್ದ ಸಹಕಾರಿ ಸಂಘದ ನಿರ್ದೆಶಕರಾದ ಪರಪ್ಪ ಮಳವಾಡ, ಬಾಳಪ್ಪ ಸಂಗಟಿ, ಮಲ್ಲಿಕಾರ್ಜುನ ಹುಲೆನ್ನವರ, ಹಣಮಂತ ಕಲಕುಟ್ರಿ, ವಿಠ್ಠಲ ಜಟ್ಟೆನ್ನವರ, ಪ್ರಶಾಂತ ಪಟ್ಟಣಶೆಟ್ಟಿ, ಶಿವಾನಂದ ಕಡಾಡಿ, ಸಂಸದರ ಆಪ್ತಕಾರ್ಯದರ್ಶಿ ಸಂತೋಷ ಬಡಿಗೇರ, ಬಿ.ಆರ್. ಪಾಟೀಲ ಸೇರಿದಂತೆ ಸಿಬ್ಬಂದಿಗಳು ಉಪಸ್ಥಿತರಿದ್ದರು.