ಬೆಂಗಳೂರು: ಹಲವು ದಿನಗಳ ಹಿಂದೆ ಹಣಕಾಸು ವಿಚಾರವಾಗಿ ನನಗೂ ಚಿತ್ರನಟ ದರ್ಶನ್ ಹಲ್ಲೆ ಯತ್ನ ನಡೆಸಿ ಜೀವ ಬೆದರಿಕೆ ಹಾಕಿದ್ದರು ಎಂದು ಕನ್ನಡ ಚಿತ್ರ ನಿರ್ಮಾಪಕ ಬಿ.ಭರತ್ ಆರೋಪಿಸಿದ್ದಾರೆ.
ದರ್ಶನ್ ಅವರಿಂದ ಜೀವ ಬೆದರಿಕೆ ಹಿನ್ನಲೆಯಲ್ಲಿ ತಮ್ಮ ಕುಟುಂಬಕ್ಕೆ ರಕ್ಷಣೆ ಒದಗಿಸುವಂತೆ ಕೋರಿ ಪೊಲೀಸರಿಗೆ ಅವರು ಮನವಿ ಮಾಡಿದ್ದಾರೆ.
ಹಲ್ಲೆ ಯತ್ನದ ಕುರಿತು ವಿವರ ಬಹಿರಂಗಗೊಳಿಸಿರುವ ಅವರು, ಕೆಲ ವರ್ಷಗಳ ಹಿಂದೆ ಚಲನಚಿತ್ರವೊಂದರ ನಿರ್ಮಾಣದ ವಿಚಾರವಾಗಿ ನನಗೆ ದರ್ಶನ್ ಅವರು ಬೆದರಿಕೆ ಹಾಕಿದ್ದರು. ನೀನು
ಸಿನಿಮಾ ಮಾಡು ಅಥವಾ ಸಿನಿಮಾ ಎನ್ ಒಸಿ ಕೊಡು ಇಲ್ಲದಿದ್ದರೆ ಭೂಮಿ ಮೇಲೆ ಇರಲ್ಲ ಎಂದು ಧಮ್ಮಿ ಹಾಕಿದ್ದರು. ದರ್ಶನ್ ನನ್ನನ್ನೂ ಮೈಸೂರು ರಸ್ತೆ ಯಲ್ಲಿರುವ ಟೊರಿನೊ ಫ್ಯಾಕ್ಟರಿಗೆ ಕರೆದಿದ್ದರು. ನಾನು ಮಂಜಾಗೃತ ಕ್ರಮವಾಗಿ ಕೆಲವು ಸ್ನೇಹಿತರನ್ನು ಕರೆದೊಯ್ದಿದ್ದೆ. ఇల్లವಾದರೆ ಅಂದು ನನಗೂ ರೇಣುಕಾಸ್ವಾಮಿಯ ಸ್ಥಿತಿ ಆಗುತ್ತಿತ್ತೇನೋ ಎಂದಿದ್ದಾರೆ.
ಈ ಜೀವ ಬೆದರಿಕೆ ಬಗ್ಗೆ ಕೆಂಗೇರಿ ಠಾಣೆಗೆ ದೂರು ನೀಡಿದರೂ ಪೊಲೀಸರು ಗಂಭೀರವಾಗಿ ಪರಿಗಣಿಸಿರಲಿಲ್ಲ. ಹೀಗಾಗಿ ನಾನು ದರ್ಶನ್ ಗ್ಯಾಂಗ್‌ನಿಂದ ಜೀವ ಭೀತಿ ಎದುರಿಸುತ್ತಿದ್ದೇನೆ ಎಂದಿದ್ದಾರೆ.