This is the title of the web page
This is the title of the web page

Live Stream

September 2023
S M T W T F S
 12
3456789
10111213141516
17181920212223
24252627282930

| Latest Version 9.4.1 |

State News

ನಿಪ್ಪಾಣಿಯ ನಗರ ಸಭೆಯ ಕಟ್ಟಡದ ಮೇಲೆ ಹಾರಾಡುತ್ತಿರುವ ಎಂಇಎಸ್ ಭಗವಾ ಧ್ವಜವನ್ನು ತಗೆಯುವಂತೆ ಸರ್ಕಾರಕ್ಕೆ ಎಚ್ಚರಿಕೆ ನೀಡಿದ ಭೀಮಪ್ಪ ಗಡಾದ

Join The Telegram Join The WhatsApp

ಬೆಳಗಾವಿ-

ಸಮಸ್ತ ಕನ್ನಡಿಗರ ಆಶಯಗಳಿಗೆ ವಿರೋಧವಾಗಿ ಮತ್ತು ಕನ್ನಡಿಗರ ಭಾವನೆಗಳನ್ನು ಕೆರಳಿಸುವ ರೀತಿಯಲ್ಲಿ ಬೆಳಗಾವಿ ಜಿಲ್ಲೆಯ ನಿಪ್ಪಾಣಿಯ ನಗರ ಸಭೆಯ ಕಟ್ಟಡದ ಮೇಲೆ ಸುಮಾರು 31 ವರ್ಷಗಳಿಂದ ಕಾನೂನು ಬಾಹಿರವಾಗಿ ಹಾರಾಡುತ್ತಿರುವ ಮಹಾರಾಷ್ಟ್ರ ಏಕೀಕರಣ (ಎಂ.ಇ.ಎಸ್) ಸಮಿತಿಯ “ಭಗವಾ ಧ್ವಜವನ್ನು ಕೂಡಲೇ ತೆರವುಗೊಳಿಸುವಂತೆ ಸರ್ಕಾರಕ್ಕೆ ಮತ್ತು ಜಿಲ್ಲಾಡಳಿತಕ್ಕೆ ದಾಖಲೆಗಳ ಸಮೇತ ಪತ್ರ ಬರೆದು 01 ವರ್ಷ ಗತಿಸಿದ್ದರು ಸರ್ಕಾರ ಯಾವುದೇ ಕ್ರಮ ಕೈಗೊಳ್ಳದೆ ಇರುವುದನ್ನು ನೋಡಿದರೆ, ಈ ಸರ್ಕಾರವು ಕನ್ನಡಿಗರ ಪರವಾಗಿ ಇರುವುದೇ ? ಎಂಬ ಅನುಮಾನ ಉಂಟಾಗುತ್ತಿದೆ.

ಈ ಕುರಿತು ದಿನಾಂಕ: 22-12-2022 ರಂದು ಮಾನ್ಯ ಮುಖ್ಯ ಮಂತ್ರಿಗಳಿಗೆ ಪೌರಾಡಳಿತ ಸಚಿವರಿಗೆ ಮನವಿ ಸಲ್ಲಿಸಲಾಗಿತ್ತು ಪುನಃ ದಿನಾಂಕ: 07-02-2022 ರಂದು ಜಿಲ್ಲಾಡಳಿತಕ್ಕೆ ನೆನಪೋಲೆ ಕೂಡಾ ಬರೆಯಲಾಗಿತ್ತು. ಆದರೆ ಇಲ್ಲಿಯವರೆಗೂ ಧ್ವಜ ತೆರವುಗೊಳಿಸಿರುವುದಿಲ್ಲ.

ಆದರೆ ಇತ್ತೀಚಿಗೆ ಬೆಳಗಾವಿ ಕಾಲೇಜೊಂದರಲ್ಲಿ ನಡೆದ ಸಮಾರಂಭದಲ್ಲಿ ಕನ್ನಡ ಅಭಿಮಾನ ಹೊಂದಿದ ವಿದ್ಯಾರ್ಥಿಯೊಬ್ಬ “ಕನ್ನಡ ಬಾವುಟ” ಪ್ರದರ್ಶನ ಮಾಡಿದಾಗ ಪೊಲೀಸರು ಅವನನ್ನು ಥಳಿಸಿ ಅವನ ಮೇಲೆ ಪ್ರಕರಣ ದಾಖಲಿಸಿರುವುದು ಮತ್ತು ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷರು ಕನ್ನಡ ಧ್ವಜ ಹಾರಿಸಲು ಬೆಳಗಾವಿಗೆ ಬರುವ ಸಮಯದಲ್ಲಿ ಅವರನ್ನು ಹಾಗೂ ಕನ್ನಡ ಹೋರಾಟಗಾರರನ್ನು ಗಡಿ ಪ್ರದೇಶ ಮಾಡದಂತೆ ತಡೆಹಿಡಿದಿರುವುದು ಅಲ್ಲದೇ ಕನ್ನಡ ಧ್ವಜ, ಕನ್ನಡ ನೆಲ, ಜಲದ ಬಗ್ಗೆ ಹೋರಾಟ ನಡೆಸುತ್ತಿರುವ ಕನ್ನಡದ ಕಟ್ಟಾಳುಗಳ ಮೇಲೆಯೆ ಪ್ರಕರಣ ದಾಖಲಿಸುತ್ತಿರುವುದನ್ನು ನೋಡಿದರೆ ಈ ಸಕಾರವು ಕನ್ನಡಿಗರ ಪರವಾಗಿಲ್ಲ ಎನ್ನುವುದು ಸ್ಪಷ್ಟವಾಗುತ್ತದೆ.

1964 ರ ಕರ್ನಾಟಕ ಪೌರ ಸಭೆಗಳ ಅಧಿನಿಯಮ ಸೆಕ್ಷನ್ 372 ದಲ್ಲಿ ವಿವರಿಸಿದ ಪ್ರಕಾರ ಕಛೇರಿಗಳ ಮೇಲೆ ರಾಷ್ಟ್ರೀಯ ಬಾವುಟ ಮತ್ತು ಸರ್ಕಾರದಿಂದ ಅನುಮೋದಿತವಾದ ಬಾವುಟಗಳನ್ನು ಹಾರಿಸತಕ್ಕದ್ದು ಈ ನಿಯಮವನ್ನು ಉಲ್ಲಂಘಿಸಿದ ಯಾವೊಬ್ಬ ವ್ಯಕ್ತಿಗೆ 3 ತಿಂಗಳ ವಿಸ್ತರಿಸಬಹುದಾದ ಕಾರಾವಾಸ ಅಥವಾ 5000 ರೂ. ಗಳ ದಂಡ ವಿಧಿಸಬಹುದಾಗಿದೆ ಮುಂದುವರೆದು ಪ್ರತಿಯೊಂದು ದಿನಕ್ಕೆ 500 ರೂ. ಗಳ ಜಾಲ್ಮಾನೆಯಿಂದ ದಂಡಿತವಾಗತಕ್ಕದ್ದು ಎಂದು ಉಲ್ಲೇಖಿಸಲಾಗಿದೆ.

ಕಾನೂನು ಬಾಹಿರವಾಗಿ ಹಾರಾಡುತ್ತಿರುವ ಈ “ಭಗವಾ ಧ್ವಜವನ್ನು ಕೂಡಲೇ ತೆರವುಗೊಳಿಸಿ ಕಾನೂನಿನ ಘನತೆ ಗೌರವಗಳನ್ನು ಹೆಚ್ಚಿಸುವುದರ ಮೂಲಕ ಈ ಸರ್ಕಾರ ಕನ್ನಡಿಗರ ಪರವಾಗಿ ಇರುತ್ತದೆ. ಎಂಬುದನ್ನು ಸಮಸ್ತ ಕನ್ನಡಿಗರಿಗೆ ಮನವರಿಕೆ ಮಾಡಿಕೊಡದೆ ಇದ್ದಲ್ಲಿ ಮುಂಚಿತವಾಗಿ ತಮಗೆ ತಿಳಿಸದೆ ಯಾವುದೇ ದಿವಸ ನಾನೇ ಸ್ವತಃ ಸಮಸ್ತ ಕನ್ನಡಿಗರೊಂದಿಗೆ ಕೂಡಿ ಈ ಧ್ವಜವನ್ನು ತೆರವುಗೊಳಿಸಿ ಆ ಸ್ಥಳದಲ್ಲಿ “ಕನ್ನಡ ನಾಡ ಧ್ವಜವನ್ನು ಹಾರಿಸಬೇಕಾಗುವುದು. ಆ ಸಮಯದಲ್ಲಿ ಕಾನೂನಿನ ಶಾಂತಿ, ಸುವ್ಯವಸ್ಥೆಗೆ ಧಕ್ಕೆಯಾದರೆ ಅದಕ್ಕೆ ಜಿಲ್ಲಾಡಳಿತ ಮತ್ತು ಸರ್ಕಾರವೇ ಹೊಣೆಯಾಗಬೇಕಾಗುವುದು ಎಂದು ಈ ದಿಸವ ಮಾನ್ಯ ಜಿಲ್ಲಾಧಿಕಾರಿಗಳಿಗೆ ಹಾಗೂ ಜಿಲ್ಲಾ ಪೊಲೀಸ ವರಿಷ್ಠಾಧಿಕಾರಿಗಳಿಗೆ ಬರೆದಿರುವ ಪತ್ರದಲ್ಲಿ ತಿಳಿಸಲಾಗಿದೆ ಎಂದು ಮೂಡಲಗಿಯ ಉತ್ತರ ಕರ್ನಾಟಕ ಹೋರಾಟ ಸಮಿತಿ ಹಾಗೂ ಮಾಹಿತಿ ಹಕ್ಕು ಕಾರ್ಯಕರ್ತ ಭೀಮಪ್ಪ ಗುಂ ಗಡಾದ ಸರಕಾರಕ್ಕೆ ಬರೆದ ಎಚ್ಚರಿಕೆ ಪತ್ರದಲ್ಲಿ ತಿಳಿಸಿದ್ದಾರೆ.

 


Join The Telegram Join The WhatsApp
Admin
the authorAdmin

Leave a Reply