ಬೆಳಗಾವಿ : ನಾಗರಿಕ ಹಿತ ರಕ್ಷಣಾ ಸಮಿತಿ ಮತ್ತು ಇಸ್ಕಾನ್ ಮಂದಿರಗಳ ವತಿಯಿಂದ ನೆರೆಯ ಬಾಂಗ್ಲಾದೇಶದಲ್ಲಿ ಇಸ್ಕಾನ್ ಮಂದಿರದ ಸ್ವಾಮೀಜಿಯವರನ್ನು ಬಂಧ ಮುಕ್ತಗೊಳಿಸಲು ಒತ್ತಾಯಿಸಿ ಹಿಂದೂ ಜನಾಕ್ರೋಶ ಮೋರ್ಚಾವನ್ನು ಜ.8 ರಂದು ಬೆಳಗಾವಿಯಲ್ಲಿ ಆಯೋಜಿಸಲಾಗಿದೆ.

ಬಾಂಗ್ಲಾದೇಶದಲ್ಲಿ ಇಸ್ಕಾನ್ ಸ್ವಾಮೀಜಿಯವರನ್ನು ಬಂಧಿಸಿ ಹಲವು ಹಿಂದೂ ದೇಗುಲಗಗಳನ್ನು ಧ್ವಂಸಗೊಳಿಸಲಾಗಿದೆ. ಮಹಿಳೆಯರ ಮೇಲೆ ಅತ್ಯಾಚಾರ ಎಸಗಲಾಗುತ್ತಿದೆ. ನಿರಂತರವಾಗಿ ಹಿಂದುಗಳ ಕಗ್ಗೊಲೆ ಖಂಡಿಸಲು ಈ ಬೃಹತ್ ಪ್ರತಿಭಟನೆ ಆಯೋಜಿಸಲಾಗಿದೆ. ಬೆಳಗಾವಿಯ ಧರ್ಮವೀರ ಸಂಭಾಜಿ ಮಹಾರಾಜ ಚೌಕದಿಂದ ಬೆಳಿಗ್ಗೆ 9-45 ಕ್ಕೆ ಪ್ರಾರಂಭವಾಗುವ ಮೋರ್ಚಾ, ಕಿರ್ಲೋಸ್ಕರ್ ರಸ್ತೆ, ರಾಮದೇವ ಗಲ್ಲಿ, ಖಡೇ ಬಜಾರ್, ಶನಿವಾರಕೂಟ, ಕಾಕತಿವೇಸ್, ಚನ್ನಮ್ಮ ವೃತ್ತದವರೆಗೂ ಸಾಗಿ ಅಲ್ಲಿ ಬೃಹತ್ ಮಾನವ ಸರಪಳಿ ಹಮ್ಮಿಕೊಳ್ಳಲಾಗುತ್ತಿದೆ.

ಈ ಸಂದರ್ಭದಲ್ಲಿ ಬೆಳಗಾವಿಯ ವ್ಯಾಪಾರಿಗಳು ಸುಮಾರು ಒಂದು ಗಂಟೆಗಳ ಕಾಲ ವ್ಯಾಪಾರವನ್ನು ಸ್ಥಗಿತಗೊಳಿಸಿ ಈ ಬೃಹತ್ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ಬೆಳಗಾವಿಯ ಸುತ್ತ ಮುತ್ತಲಿನ ಸುಮಾರು 25 ಕ್ಕೂ ಹೆಚ್ಚು ಪೂಜ್ಯ ಸ್ವಾಮೀಜಿಯವರರು, ವಿವಿಧ ಸಮಾಜದ ಪ್ರಮುಖರು, ವ್ಯಾಪಾರಸ್ಥರು, ಉದ್ಯಮದಾರರನ್ನು ಸತತ ಒಂದು ತಿಂಗಳಿನಿಂದ ಸಂಪರ್ಕ ಮಾಡಿದ ಪರಿಣಾಮ ಪೂರ್ಣ ಹಿಂದೂ ಸಮಾಜದ ಕಳಕಳಿ ಇರುವ ಎಲ್ಲ ಸಂಘಟನೆಗಳು ದೊಡ್ಡ ಪ್ರಮಾಣದಲ್ಲಿ ಸೇರುವ ನಿರೀಕ್ಷೆ ಇದೆ. ಹೆಚ್ಚಿನ ಸಂಖ್ಯೆಯಲ್ಲಿ ನಾಗರಿಕರು ಹಾಗೂ ಹಿಂದೂ ಸಂಘಟನೆಗಳು ಈ ಬೃಹತ್ ಮೋರ್ಚಾಕ್ಕೆ ಆಗಮಿಸುವಂತೆ

ಬೆಳಗಾವಿ ಇಸ್ಕಾನ್ ಮಂದಿರದ ಪೂಜ್ಯ ನಾಗೇಂದ್ರದಾಸ ಸ್ವಾಮೀಜಿ, ಹಿಂದೂ ಸಂಘಟನೆಗಳ ಮುಖಂಡರಾದ ಕೃಷ್ಣ ಭಟ್ , ಡಾ. ಬಸವರಾಜ ಬಾಗೋಜಿ, ಶಿವಾಜಿ ಶಹಪುರಕರ, ರೋಹನ ಜವಳಿ,ವಿಜಯ ಜಾಧವ, ಜಯಶ್ರೀ ಮಂಡ್ರೋಳಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.