ದೆಹಲಿ : ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವಿರುದ್ಧ ಜಾರಿ ನಿರ್ದೇಶನಾಲಯ (ಇ.ಡಿ) 120 ಬಿ ಅಡಿ ದಾಖಲಿಸಿದ್ದ ಪ್ರಕರಣವನ್ನು ಸುಪ್ರೀಂ ಕೋರ್ಟ್ ಮಂಗಳವಾರ ವಜಾ ಮಾಡಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್ ನೀಡಿದ್ದ ಅದೇಶವನ್ನೂ ಸುಪ್ರೀಂ ಕೋರ್ಟ್ ರದ್ದುಗೊಳಿಸಿದೆ.

ಪ್ರಕರಣದಲ್ಲಿ ಶಿವಕುಮಾರ್ ಸುಮಾರು ಮೂರು ತಿಂಗಳ ಕಾಲ ಜೈಲುಪಾಲಾಗಿದ್ದರು.

ಶಿವಕುಮಾರ್ ವಿರುದ್ಧ ED ದಾಖಲಿಸಿದ್ದ 120B ಪ್ರಕರಣವನ್ನು ಸುಪ್ರೀಂಕೋರ್ಟ್ ರದ್ದುಗೊಳಿಸಿದೆ. 2017ರ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಕೆಶಿ ವಿರುದ್ಧ ಹೈಕೋರ್ಟ್‌ನಲ್ಲಿ ಸಲ್ಲಿಕೆಯಾಗಿತ್ತು. ಇದನ್ನು ರದ್ದುಗೊಳಿಸುವಂತೆ ಡಿಕೆಶಿ ಸುಪ್ರೀಂಕೋರ್ಟ್ ಮೊರೆ ಹೋಗಿದ್ದರು. ಈ 120ಬಿ ಪ್ರಕರಣದಲ್ಲಿ ಶಿವಕುಮಾ‌ರ್ ತಿಹಾರ್ ಜೈಲಿಗೆ ಹೋಗಿದ್ದರು. ಸುಪ್ರೀಂಕೋರ್ಟ್‌ನ ಇಂದಿನ ತೀರ್ಪು ಡಿಕೆಶಿ ಅವರಿಗೆ ಬಿಗ್ ರಿಲೀಫ್ ಸಿಕ್ಕಿದೆ.

ಏನಿದು 120B ಪ್ರಕರಣ?
ಡಿಕೆಶಿ ಹಾಗೂ ಬೆಂಬಲಿಗರ ಮನೆಗಳ ಮೇಲೆ 2017ರ ಆಗಸ್ಟ್ 2ರಂದು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದರು. ಈ ವೇಳೆ ಡಿಕೆಶಿ ಬೆಂಬಲಿಗರ ಮನೆಯಲ್ಲಿ 7 ಕೋಟಿ ರೂ. ಹಣ ಸಿಕ್ಕಿತ್ತು. ಡಿಕೆಶಿ ಬೆಂಬಲಿಗರ ಮನೆಯಲ್ಲಿ ಬೇನಾಮಿಯಾಗಿ ಹಣ ಇರಿಸಿದ್ದಾರೆ ಎಂದು ಆರೋಪಿಸಿ 2020ರ ಅಕ್ಟೋಬ‌ರ್ 3ರಂದು FIR ದಾಖಲಾಗಿತ್ತು. 120B ಅಡಿಯಲ್ಲಿ ದಾಖಲಾದ ಪ್ರಕರಣವನ್ನು ರದ್ದುಗೊಳಿಸಬೇಕೆಂದು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಅಲ್ಲಿ ಗೆಲುವು ಸಿಗದ ಕಾರಣ ಸುಪ್ರೀಂಕೋರ್ಟ್ ಮೊರೆ ಹೋಗಿದ್ದರು.