ನವದೆಹಲಿ: ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕನಿಷ್ಠ ರಾಜ್ಯಗಳಲ್ಲಿ ಬಿಜೆಪಿ ಕ್ಲೀನ್ ಸ್ವೀಪ್ ಮಾಡಬಹುದು ಎಂದು ಚುನಾವಣೋತ್ತರ ಸಮೀಕ್ಷೆಗಳು ಹೇಳಿವೆ. ಗುಜರಾತ್‌ನ ಎಲ್ಲಾ 26, ಮಧ್ಯ ಪ್ರದೇಶದ ಎಲ್ಲಾ 29, ಛತ್ತೀಸ್‌ ಗಢದ ಎಲ್ಲಾ 11. ದೆಹಲಿಯ ಎಲ್ಲ 7 ಹಿಮಾಚಲ ಪ್ರದೇಶದ ಎಲ್ಲಾ 4 ಸ್ಥಾನಗಳನ್ನು ಬಿಜೆಪಿ ಗೆಲ್ಲುವ ಸಾಧ್ಯತೆ ಇದೆ ಎಂದು ಹಲವು ಸಮೀಕ್ಷಾ ಸಂಸ್ಥೆಗಳು ಭವಿಷ್ಯ ನುಡಿದಿವೆ.