ತಿರುವನಂತಪುರ: ಕೇರಳದಲ್ಲಿ ಅಂಬೆಗಾಲಿಡುತ್ತಿರುವ ಬಿಜೆಪಿ ಈಗ ಹೊಸ ಸಾಧನೆ ಮಾಡುವತ್ತ ಹೆಜ್ಜೆ ಹಾಕಿದೆ‌ ಸ್ಥಳೀಯವಾಗಿ ಜನರ ನಡುವೆ ಬಿಜೆಪಿ ಜನಪ್ರಿಯ ವಾಗುವುದಕ್ಕಿಂತ ಹೆಚ್ಚಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ಹೆಚ್ಚು ಜನಪ್ರಿಯತೆ ಗಳಿಸಿದೆ. ಫೇಸ್ ಬುಕ್ ಪುಟ 10 ಲಕ್ಷ ಹಿಂಬಾಲಕರನ್ನು ಹೊಂದುವ ಮೂಲಕ ಬಿಜೆಪಿ ಸಾಧನೆ ಮಾಡಿದೆ. ಬಿಜೆಪಿ ಕೇರಳನ್ನು ಕೂಡ 10 ಲಕ್ಷ ಪಡೆದುಕೊಂಡಿದೆ‌ ಆಡಳಿತರೂಢ ಸಿಪಿಎಂ 7.72 ಲಕ್ಷ ಮತ್ತು ಕೇರಳ ಕಾಂಗ್ರೆಸ್ ಕೇವಲ 3.52 ಲಕ್ಷ ಹಿಂಬಾಲಕರನ್ನು ಹೊಂದಿದೆ.