This is the title of the web page
This is the title of the web page

Live Stream

March 2023
S M T W T F S
 1234
567891011
12131415161718
19202122232425
262728293031  

| Latest Version 9.4.1 |

State News

ಮಸಗುಪ್ಪಿಯಲ್ಲಿ ವಿಜಯ ಸಂಕಲ್ಪ ಅಭಿಯಾನಕ್ಕೆ ಚಾಲನೆ : ಮತ್ತೆ ಬಿಜೆಪಿ ಅಧಿಕಾರಕ್ಕೆ- ಶಾಸಕ ಬಾಲಚಂದ್ರ ಜಾರಕಿಹೊಳಿ

Join The Telegram Join The WhatsApp

ಮೂಡಲಗಿ : 

ಬಿಜೆಪಿ ರಾಜ್ಯದಲ್ಲಿ ಮತ್ತೊಮ್ಮೆ ಅಧಿಕಾರಕ್ಕೆ ಬರಬೇಕಾದರೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಜನಪರ ಕಾರ್ಯಗಳನ್ನು ಮತದಾರರಿಗೆ ಮನವರಿಕೆ ಮಾಡಿಕೊಡಬೇಕು. ಇಂದಿನಿಂದ ಪ್ರತಿ ಮತದಾರರ ಮನೆಮನೆಗೆ ತೆರಳಿ ವಿಜಯ ಸಂಕಲ್ಪ ಅಭಿಯಾನವನ್ನು ಯಶಸ್ವಿಗೊಳಿಸುವಂತೆ ಶಾಸಕ ಹಾಗೂ ಕೆಎಮ್‍ಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು.

ತಾಲೂಕಿನ ಮಸಗುಪ್ಪಿ ಗ್ರಾಮದ ಮಹಾಲಕ್ಷ್ಮೀದೇವಿ ದೇವಸ್ಥಾನದ ಸಮುದಾಯ ಭವನದಲ್ಲಿ ಶನಿವಾರದಂದು ಬಿಜೆಪಿ ಅರಭಾವಿ ಮಂಡಲ ಏರ್ಪಡಿಸಿದ್ದ ವಿಜಯ ಸಂಕಲ್ಪ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಇಂದಿನಿಂದ ಕಾರ್ಯಕರ್ತರು ತಮ್ಮೆಲ್ಲ ಕೆಲಸಗಳನ್ನು ಕೇವಲ ಪಕ್ಷಕ್ಕೆ ಮಾತ್ರ ಮೀಸಲಿಟ್ಟು ಪಕ್ಷದ ಕಾರ್ಯಕ್ರಮಗಳನ್ನು ಯಶಸ್ವಿಗೊಳಿಸಲು ಕರೆ ನೀಡಿದರು.

ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ರಾಜ್ಯದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಉತ್ತಮ ಯೋಜನೆಗಳನ್ನು ಜನರಿಗೆ ರೂಪಿಸಿದ್ದಾರೆ. ಸಾಕಷ್ಟು ಅಭಿವೃದ್ಧಿಪರ ಯೋಜನೆಗಳನ್ನು ಸಾಕಾರಗೊಳಿಸಿದ್ದಾರೆ. ಏಪ್ರೀಲ್ ತಿಂಗಳಲ್ಲಿ ಜರುಗಲಿರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಮತ್ತೊಮ್ಮೆ ಸರ್ಕಾರ ನಡೆಸಲು ಕಾರ್ಯಕರ್ತರು ಉಭಯ ಸರ್ಕಾರಗಳ ಸಾಧನೆಗಳನ್ನು ತಿಳಿಸಲು ಕರಪತ್ರಗಳನ್ನು ಮತ್ತು ಸ್ಟೀಕರಗಳನ್ನು ವಿತರಿಸಬೇಕು. ಇಂದಿನಿಂದ ಆರಂಭವಾಗಿರುವ ವಿಜಯ ಸಂಕಲ್ಪ ಅಭಿಯಾನದ ವೇಳೆ ಪ್ರತಿ ಮನೆಗಳಿಗೆ ಕಾರ್ಯಕರ್ತರು ಭೇಟಿ ನೀಡಬೇಕು ಸಮಯ ಪ್ರಜ್ಞೆ ರೂಢಿಸಿಕೊಂಡು ಪಕ್ಷದ ಎಲ್ಲ ಕಾರ್ಯಕ್ರಮಗಳನ್ನು ಅಚ್ಚುಕಟ್ಟಾಗಿ ಆಯೋಜನೆ ಮಾಡಬೇಕು. ಜ.29ರ ತನಕ ಶಿಸ್ತಿನಿಂದ ಕೆಲಸ ನಿರ್ವಹಿಸಬೇಕು. ಕಾರ್ಯಕರ್ತರೇ ನಮ್ಮ ಪಕ್ಷದ ಆಸ್ತಿಯಾಗಿದ್ದು, ಕಾರ್ಯಕರ್ತರನ್ನು ಗೌರವದಿಂದ ನಡೆಸಿಕೊಳ್ಳುತ್ತಿರುವ ಏಕೈಕ ಪಕ್ಷವೇ ನಮ್ಮ ಬಿಜೆಪಿಯಾಗಿದೆ ಎಂದು ತಿಳಿಸಿದರು.

ನಮ್ಮ ಪಕ್ಷದ ವಿರುದ್ದ ನಮ್ಮ ವಿರೋಧಿ ಪಕ್ಷಗಳು ಎಷ್ಟೇ ಅಪಪ್ರಚಾರಗಳನ್ನು ನಡೆಸುತ್ತಿದ್ದರೂ ಅದಕ್ಕೆಲ್ಲ ಸೊಪ್ಪು ಹಾಕಬೇಡಿ. ಕಾರ್ಯಕರ್ತರು ಶ್ರಮ ವಹಿಸಿದ್ದಾದಲ್ಲಿ ಖಂಡಿತವಾಗಿಯೂ ರಾಜ್ಯದಲ್ಲಿ 120 ಸ್ಥಾನಗಳನ್ನು ಗಳಿಸಿ ಸರಳ ಬಹುಮತವನ್ನು ಪಡೆದು ಅಧಿಕಾರ ಚುಕ್ಕಾಣಿ ಹಿಡಿಯುತ್ತೇವೆ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು.

ಅರಭಾವಿ ಮಂಡಲದ ವಿಸ್ತಾರಕ ವೆಂಕಟೇಶ ಲಾಳೆ ಮಾತನಾಡಿ, ಕಾಂಗ್ರೇಸಿನವರು ಈ ಚುನಾವಣೆಯಲ್ಲಿ ಜನರಿಗೆ ಸುಳ್ಳು ಆಶ್ವಾಸನೆಗಳನ್ನು ನೀಡುತ್ತಿದ್ದಾರೆ. ನಮ್ಮ ಪಕ್ಷ ಈಗಾಗಲೇ ಕೇಂದ್ರ ಹಾಗೂ ರಾಜ್ಯದಲ್ಲಿ ಅಧಿಕಾರದಲ್ಲಿದೆ. ಬಿ ಎಸ್ ಯಡಿಯೂರಪ್ಪ ಹಾಗೂ ಬಸವರಾಜ ಬೊಮ್ಮಾಯಿ ಅವರ ಸರ್ಕಾರದಲ್ಲಿ ನಡೆದ ಕಾಮಗಾರಿಗಳನ್ನು ಜನರ ಬಳಿಗೆ ವಿವರಿಸೋಣ. ಜೊತೆಗೆ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಕೈಗೊಂಡಿರುವ ಪ್ರಗತಿಪರ ಕಾರ್ಯಗಳನ್ನು ಮುಂದಿಟ್ಟುಕೊಂಡು ಮತ ಕೇಳೊಣ. ರಾಜ್ಯದಲೇ ಬಾಲಚಂದ್ರ ಜಾರಕಿಹೊಳಿಯವರು ಇತರ ಶಾಸಕರಿಗೆ ಮಾದರಿಯಾದ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದಾರೆ. ಇಂತಹ ಜನಸೇವಕನನ್ನು ಪಡೆದಿರುವುದು ಅರಭಾವಿ ಕ್ಷೇತ್ರದ ಪುಣ್ಯ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಿಜೆಪಿ ಮಂಡಲ ಅಧ್ಯಕ್ಷ ಮಹಾದೇವ ಶಕ್ಕಿ ವಹಿಸಿದ್ದರು.

ವೇದಿಕೆಯಲ್ಲಿ ಎಪಿಎಮ್‍ಸಿ ಮಾಜಿ ಅಧ್ಯಕ್ಷ ಅಜ್ಜಪ್ಪ ಗಿರಡ್ಡಿ, ಪ್ರಭಾ ಶುಗರ್ ನಿರ್ದೇಶಕ ಸಿದ್ದಲಿಂಗ ಕಂಬಳಿ, ಪಿಎಲ್‍ಡಿ ಬ್ಯಾಂಕ್ ಅಧ್ಯಕ್ಷ ಅಪ್ಪಯ್ಯ ಬಡನಿಂಗಗೋಳ, ಉಪಾಧ್ಯಕ್ಷ ರಾಜು ಬೈರಗೋಳ, ಮುತ್ತಪ್ಪ ಕುಳ್ಳೂರ, ಬಸವರಾಜ ಹಿಡಲಕ್, ಹಣಮಂತ ತೇರದಾಳ, ಬಸವರಾಜ ಭುಜನ್ನವರ, ಭರಮಪ್ಪ ಆಸಿರೊಟ್ಟಿ, ಭರಮಣ್ಣ ಗಂಗನ್ನವರ, ಆನಂದ ಹೊಸಕೋಟಿ, ಪತ್ರಯ್ಯ ಚರಂತಿಮಠ, ಬಾಳಪ್ಪ ತಿಗಡಿ, ಕೆಂಚಪ್ಪ ಶಿಂತ್ರಿ, ಬಿಜೆಪಿಯ ಪದಾಧಿಕಾರಿಗಳಾದ ಭೀಮಶಿ ಮಾಳೆದವರ, ದುಂಡಪ್ಪ ನಂದಗಾವಿ, ಪರಸಪ್ಪ ಬಬಲಿ, ಮಹಾಂತೇಶ ಕುಡಚಿ, ಪಾಂಡುರಂಗ ಮಹೇಂದ್ರಕರ, ಪ್ರಮೋದ ನುಗ್ಗಾನಟ್ಟಿ, ನಾಗರಾಜ ಕುದರಿ, ಅಲ್ಪಾವಧಿ ವಿಸ್ತಾರಕರು, ಶಕ್ತಿಕೇಂದ್ರಗಳ ಪ್ರಮುಖರು ಉಪಸ್ಥಿತರಿದ್ದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಯುವ ಮುಖಂಡ ಸಂಜು ಹೊಸಕೋಟಿ ಮಾತನಾಡಿ, ಮಸಗುಪ್ಪಿ ಗ್ರಾಮದ ಅಭಿವೃದ್ಧಿಗೆ ಶಾಸಕ ಬಾಲಚಂದ್ರ ಜಾರಕಿಹೊಳಿಯವರು ಹಲವಾರು ಯೋಜನೆಗಳನ್ನು ಸಾಕಾರಗೊಳಿಸಿದ್ದಾರೆ. ಮಹಾಲಕ್ಷ್ಮೀ ಸಮುದಾಯ ಭವನ ನಿರ್ಮಾಣಕ್ಕೆ 50ಲಕ್ಷ ರೂ, ರಸ್ತೆ ಕಾಮಗಾರಿಯನ್ನು ಕೈಗೊಂಡಿದ್ದಾರೆ ಜೊತೆಗೆ ಕೋವಿಡ್ ಸಮಯದಲ್ಲಿ ಸಂತ್ರಸ್ಥ ಕುಟುಂಬಗಳಿಗೆ ಆಸರೆಯಾಗಿ ಆಶ್ರಯದಾತರಾಗಿದ್ದಾರೆ. ಅಂದಿನ ಸಂದಿಗ್ಭ ಪರಿಸ್ಥಿಯಲ್ಲಿ ಮಸಗುಪ್ಪಿ ಗ್ರಾಮವೇ ಜಲಾವೃತಗೊಂಡಿತ್ತು ಆಪದ್ಬಾಂಧವರಂತೆ ನಮ್ಮನ್ನೆಲ್ಲ ಕಷ್ಟದಿಂದ ಕಾಪಾಡಿದ ಕರುಣಾಮಯಿ ಹೃದಯದ ಶಾಸಕರು. ಮುಂದಿನ ಚುನಾವಣೆಯಲ್ಲಿ ಬಾಲಚಂದ್ರ ಜಾರಕಿಹೊಳಿಯವರಿಗೆ ನಮ್ಮ ಗ್ರಾಮದಿಂದ ಹೆಚ್ಚಿನ ಲೀಡ್ ಮಾಡಿಕೊಂಡುವುದಾಗಿ ತಿಳಿಸಿದರು.


Join The Telegram Join The WhatsApp
Admin
the authorAdmin

Leave a Reply