ಬೆಂಗಳೂರು :  ಬಿಜೆಪಿ ಶಾಸಕರಾದ ಶಿವರಾಮ ಹೆಬ್ಬಾರ್ ಹಾಗೂ ಎಸ್‌.ಟಿ. ಸೋಮಶೇಖ‌ರ್ ಅವರಿಗೆ ಬಿಜೆಪಿ ನೋಟಿಸ್‌ ಜಾರಿ ಮಾಡಿದೆ.

ರಾಜ್ಯಸಭಾ ಚುನಾವಣೆಯಲ್ಲಿ ಸೋಮಶೇಖ‌ರ್ ಅಡ್ಡ ಮತದಾನ ಮಾಡಿದರೆ, ಹೆಬ್ಬಾರ್ ಅನಾರೋಗ್ಯದಿಂದ ಮತದಾನಕ್ಕೆ ಗೈರಾಗಿದ್ದರು. ನೋಟಿಸ್ ತಲುಪಿದ ಐದು ದಿನಗಳ ಒಳಗೆ ಉತ್ತರಿಸುವಂತೆ ಬಿಜೆಪಿ ಸೂಚನೆ ನೀಡಿದೆ. 5 ದಿನಗಳೊಳಗೆ ಉತ್ತರಿಸದಿದ್ದರೆ ಪಕ್ಷಾಂತರ ನಿಷೇಧ ಕಾಯ್ದೆಯಡಿ ಶಾಸಕತ್ವ ಅನರ್ಹತೆಗೆ ಅಗತ್ಯ ಕ್ರಮ ಕೈಗೊಳ್ಳುವ ಬಗ್ಗೆ ಎಚ್ಚರಿಕೆ ನೀಡಲಾಗಿದೆ.