ಬೆಂಗಳೂರು :
75 ವರ್ಷ ವಯಸ್ಸು ದಾಟಿದವರನ್ನು ಬಿಟ್ಟು ಮತ್ತೊಮ್ಮೆ ಗೆಲ್ಲುವ ಸಾಮರ್ಥ್ಯ ಹೊಂದಿರುವ ಹಾಗೂ ಯಾವುದೇ ಕಳಂಕ ಇಲ್ಲದ ಇನ್ನುಳಿದ ಹಿರಿಯ ಸಂಸದರಿಗೆ ಮಣೆ ಹಾಕುವುದು ಸೂಕ್ತ ಎಂಬ ಚಿಂತನೆ ರಾಜ್ಯ ಬಿಜೆಪಿ ನಾಯಕತ್ವದಲ್ಲಿ ವ್ಯಕ್ತವಾಗುತ್ತಿದೆ. ಅಂದರೆ, 70 ಮತ್ತು 75 ವರ್ಷದೊಳಗಿನ ಹಲವು ಸಂಸದರಿಗೆ ಟಿಕೆಟ್ ನಿರಾಕರಿಸಲಾಗುತ್ತದೆ ಎಂಬ ನಿಲುವಿನಿಂದ ಹಿಂದೆ ಸರಿದು ಗೆಲ್ಲುವ ಮಾನದಂಡದ ಆಧಾರದ ಮೇಲೆ ಟಿಕೆಟ್ ನೀಡಬೇಕೆಂಬ ಅಭಿಪ್ರಾಯವನ್ನು ರಾಜ್ಯ ಬಿಜೆಪಿ ನಾಯಕರು ಹೊಂದಿದ್ದಾರೆ.