ಬೆಳಗಾವಿ : ನಿಪ್ಪಾಣಿ ನಗರಸಭೆ ಚುನಾವಣೆಯಲ್ಲಿ ಬಿಜೆಪಿ ಮತ್ತೆ ಜಯಭೇರಿ ಬಾರಿಸಿದೆ. ಬಿಜೆಪಿ ಸದಸ್ಯೆ ಸೋನಲ್ ರಾಜೇಶ್ ಕೊಠಿಯಾ ಅಧ್ಯಕ್ಷರಾಗಿ ಮತ್ತು ಸಂತೋಷ ಸಾಂಗಾವಕರ ಉಪಾಧ್ಯಕ್ಷರಾಗಿ ಆಯ್ಕೆಯಾದರು.

ಅವರು 17 ಮತ ಪಡೆದು ರಾಷ್ಟ್ರೀಯವಾದಿ ಶರತ್ ಚಂದ್ರ ಪವಾರ್ ಗುಂಪಿನ ಅಧ್ಯಕ್ಷ ಅಭ್ಯರ್ಥಿ ಅನಿತಾ ಪಠಾಡೆ ಮತ್ತು ಉಪಾಧ್ಯಕ್ಷ ಅಭ್ಯರ್ಥಿ ಸರ್ಫ್ರಾಜ್ ಬಡೇಘರ ಅವರನ್ನು ಸೋಲಿಸಿದರು. ಇಬ್ಬರು ಕಾಂಗ್ರೆಸ್ ಮತ್ತು ಒಬ್ಬ ಸ್ವತಂತ್ರ ಸದಸ್ಯನ ಬೆಂಬಲದೊಂದಿಗೆ ಬಿಜೆಪಿ ಅಧಿಕಾರ ಉಳಿಸಿಕೊಂಡಿದೆ. ಈ ಮೂಲಕ ಶಾಸಕಿ ಶಶಿಕಲಾ ಜೊಲ್ಲೆ ಮತ್ತು ಮಾಜಿ ಸಂಸದ ಅಣ್ಣಾ ಸಾಹೇಬ್ ಜೊಲ್ಲೆ ತಮ್ಮ ಪ್ರಾಬಲ್ಯ ಉಳಿಸಿಕೊಂಡಂತಾಗಿದೆ.