ಮುಂಬೈ : ಲೋಕಸಭೆ ಚುನಾವಣೆಯಲ್ಲಿ ಕಳಪೆ ಪ್ರದರ್ಶನದ ನಂತರ, ಶುಕ್ರವಾರ ನಡೆದ ಮಹಾರಾಷ್ಟ್ರ ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಮಹಾಯುತಿ ಮೈತ್ರಿಕೂಟವು 11 ಸ್ಥಾನಗಳಲ್ಲಿ 9 ಸ್ಥಾನಗಳನ್ನು ಗೆದ್ದುಕೊಂಡಿದೆ.
ಬಿಜೆಪಿಯ ಪಂಕಜಾ ಮುಂಡೆ, ಪರಿಣಯ ಫುಕೆ, ಅಮಿತ್ ಗೋರ್ಖೆ, ಯೋಗೇಶ ತಿಲೇಕರ ಮತ್ತು ಸದಾಭವ ಖೋತ್‌ ಐದು ಬಿಜೆಪಿ ಅಭ್ಯರ್ಥಿಗಳು ಜಯಗಳಿಸಿದರು.ಅಜಿತ ಪವಾರ್ ಅವರ ಪಕ್ಷದಿಂದ ರಾಜೇಶ ವಿಟೇಕರ ಮತ್ತು ಶಿವಾಜಿರಾವ್ ಗರ್ಜೆ ಸಹ ವಿಜೇತರು ಎಂದು ಘೋಷಿಸಲಾಯಿತು, ಶಿಂಧೆ ಸೇನೆಯ ಭಾವನಾ ಗಾವ್ಲಿ ಸೇರಿದಂತೆ ಇಬ್ಬರು ಗೆದ್ದಿದ್ದಾರೆ.
ಪ್ರತಿಪಕ್ಷದ ಮಹಾ ವಿಕಾಸ್ ಅಘಾಡಿ (MVA) ಮೈತ್ರಿಕೂಟದ ಶಿವಸೇನೆ (UBT) ಮುಖ್ಯಸ್ಥ ಉದ್ಧವ್ ಠಾಕ್ರೆ ಅವರ ಆಪ್ತ ಸಹಾಯಕ ಮಿಲಿಂದ್ ನಾರ್ವೇಕರ ಮತ್ತು ಕಾಂಗ್ರೆಸ್ ಅಭ್ಯರ್ಥಿ ಪ್ರದ್ನ್ಯಾ ಸಾತವ್ ಜಯಗಳಿಸಿದ್ದಾರೆ. ಎನ್‌ಸಿಪಿ (ಶರದ್‌ ಪವಾರ್‌) ಒಕ್ಷವು ಪಿಡಬ್ಲ್ಯೂಪಿ ಅಭ್ಯರ್ಥಿ ಜಯಂತ ಪಾಟೀಲ ಅವರನ್ನು ಬೆಂಬಲಿಸಿತ್ತು. ಆದರೆ ಅವರು ಪರಾಭವಗೊಂಡರು..

ಜುಲೈ 27 ರಂದು ಅವಧಿ ಮುಗಿಯುವ ಸದಸ್ಯರ ಖಾಲಿ ಸ್ಥಾನಗಳನ್ನು ತುಂಬಲು ದ್ವೈವಾರ್ಷಿಕ ಚುನಾವಣೆಗಳನ್ನು ನಡೆಸಲಾಯಿತು. ಪ್ರತಿ ವಿಜೇತ ಅಭ್ಯರ್ಥಿಗೆ 23 ಮೊದಲ ಪ್ರಾಶಸ್ತ್ಯದ ಮತಗಳ ಕೋಟಾ ಅಗತ್ಯವಿತ್ತು.
.ಬಿಜೆಪಿ, ಶಿವಸೇನೆ (ಏಕನಾಥ್ ಶಿಂಧೆ ಶಿಬಿರ) ಮತ್ತು ಎನ್‌ಸಿಪಿ (ಅಜಿತ್ ಪವಾರ್ ಶಿಬಿರ) ಒಳಗೊಂಡ ಮಹಾಯುತಿ ಮೈತ್ರಿಕೂಟವು ಅಡ್ಡ ಮತದಾನದ ಬೆದರಿಕೆಯ ನಡುವೆ ಚುನಾವಣೆಯಲ್ಲಿ ಅತ್ಯುತ್ತಮ ಫಲಿತಾಂಶ ಎಂಬುದು ಗಮನಾರ್ಹ. ಬದಲಾಗಿ ವಿಪಕ್ಷಗಳ ಮಹಾ ವಿಕಾಸಿ ಅಘಾಡಿ ಮೈತ್ರಿಕೂಟದಿಂದ ಐದು ಮತಗಳು ನಮಗೆ ಬಂದಿವೆ ಎಂದು ಅಜಿತ ಪವಾರ್‌ ಹೇಳಿದ್ದಾರೆ.
“ಮಹಾರಾಷ್ಟ್ರದ ವಿಧಾನ ಪರಿಷತ್‌ ಚುನಾವಣೆಯಲ್ಲಿ ಈ ಪ್ರಚಂಡ ವಿಜಯವನ್ನು ದಾಖಲಿಸಿದ್ದಕ್ಕಾಗಿ ಎನ್‌ಡಿಎಯ ಎಲ್ಲಾ ನಾಯಕರಿಗೆ ಹೃತ್ಪೂರ್ವಕ ಅಭಿನಂದನೆಗಳು” ಎಂದು ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಹೇಳಿದ್ದಾರೆ.