ಬೆಳಗಾವಿ : ಸಂಕೇಶ್ವರ ಪಟ್ಟಣದ ಹೊರವಲಯದಲ್ಲಿ ಹರಿಯುವ ಹಿರಣ್ಯಕೇಶಿ ನದಿಯ ನೀರಿನಲ್ಲಿ ವ್ಯಕ್ತಿಯ ಶವವೊಂದು ಪತ್ತೆಯಾಗಿದ್ದು ಇದು ಕೊಲೆಯೋ ಅಥವಾ ಆತ್ಮಹತ್ಯೆಯೋ ಎನ್ನುವುದು ನಿಗೂಢವಾಗಿದ್ದು ಪೊಲೀಸ್ ತನಿಖೆಯಿಂದ ಸತ್ಯಾಂಶ ಹೊರಬರಬೇಕಿದೆ.
ಸಂಕೇಶ್ವರ ಪಟ್ಟಣದ ನದಿ ಗಲ್ಲಿ ಹತ್ತಿರದಲ್ಲಿ ಇರುವ ಬ್ರಿಜ್ ಕಮ್ ಬಾಂದಾರದ ನೀರಿನಲ್ಲಿ ಈ ಶವವು ಪತ್ತೆಯಾಗಿದೆ. ಪುರಸಭೆ ಕಾರ್ಮಿಕರು ನದಿಗೆ ಅಡ್ಡಲಾಗಿರುವ ಬ್ರಿಜ್ ಕಮ್ ಬಾಂದಾರದಲ್ಲಿನ ಕಸ ತೆಗೆಯುವ ಸಂದರ್ಭದಲ್ಲಿ ಈ ಶವ ಪತ್ತೆಯಾಗಿದೆ ಎಂದು ಹೇಳಲಾಗುತ್ತಿದೆ.
ಸ್ಥಳಕ್ಕೆ ಸಂಕೇಶ್ವರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಶವದ ಮೇಲೆ ಗಾಯದ ಗುರುತುಗಳಿವೆ ಎಂದು ತಿಳಿದು ಬಂದಿದೆ.