Join The Telegram | Join The WhatsApp |
ಬೆಳಗಾವಿ :
ನಾಗಪುರದಲ್ಲಿ ನಡೆಯುತ್ತಿರುವ ಮಹಾರಾಷ್ಟ್ರ ವಿಧಾನ ಮಂಡಲದ ಸದನ ಮಂಗಳವಾರ ಕರ್ನಾಟಕದ ವಿರುದ್ಧ ಗಡಿ ಠರಾವ್ ಅಂಗೀಕರಿಸಿದೆ.
ಕರ್ನಾಟಕದ 865 ಹಳ್ಳಿಗಳನ್ನು ಮಹಾರಾಷ್ಟ್ರಕ್ಕೆ ಸೇರಿಸಬೇಕು ಎಂಬ ಠರಾವ್ ಅಂಗೀಕರಿಸಿದೆ. ಆದರೆ, ಇತ್ತ ಮಹಾರಾಷ್ಟ್ರಕ್ಕೆ ಸೇರಿರುವ ಜತ್ತ ತಾಲೂಕಿನ ಕನ್ನಡಿಗರು ಬೆಳಗಾವಿಗೆ ಆಗಮಿಸಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಮೂಲಕ ನೆರವಿಗೆ ಒತ್ತಾಯಿಸಿದ್ದಾರೆ.
ಕರ್ನಾಟಕ ಸರಕಾರ ಬೆಳಗಾವಿ ಸೇರಿದಂತೆ ವಿವಿಧ ಭಾಗಗಳಲ್ಲಿ ಇರುವ ಮರಾಠಿ ಭಾಷಿಕರಿಗೆ ಪ್ರತ್ಯೇಕ ಪ್ರಾಥಮಿಕ ಶಾಲೆ ಆರಂಭಿಸಿದೆ. ಆದರೆ ಮಹಾರಾಷ್ಟ್ರ ಸರಕಾರ ತನ್ನ ರಾಜ್ಯದಲ್ಲಿರುವ ಕನ್ನಡಿಗರಿಗೆ ಯಾವುದೇ ಸೌಲಭ್ಯಗಳನ್ನು ನೀಡುತ್ತಿಲ್ಲ. ಈ ಕೂಡಲೇ ಕರ್ನಾಟಕ ಮಹಾರಾಷ್ಟ್ರದಲ್ಲಿರುವ ಕನ್ನಡಿಗರ ರಕ್ಷಣೆಗೆ ಪ್ರಾಥಮಿಕ ಶಾಲೆ, ಅಂಗನವಾಡಿ ಕೇಂದ್ರ ಪ್ರಾರಂಭಿಸಬೇಕು. ಹೊರರಾಜ್ಯದಲ್ಲಿರುವ ಕನ್ನಡಿಗರ ಮಕ್ಕಳಿಗೆ ಶಿಕ್ಷಣ, ಉದ್ಯೋಗದಲ್ಲಿ ಒದಗಿಸಬೇಕು. ಅಲ್ಲಿ ಕನ್ನಡ ಕಲಿಯುತ್ತಿರುವ ಒಂದನೇ ತರಗತಿ ಮಕ್ಕಳಿಗೆ 5000 ರೂ.ಠೇವಣಿ ಇಡುವ ಯೋಜನೆ ಜಾರಿಗೊಳಿಸಬೇಕು. ಮಹಾರಾಷ್ಟ್ರದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ಪರೀಕ್ಷೆಯನ್ನು ಕನ್ನಡ ಮಾಧ್ಯಮದಲ್ಲಿ ನಡೆಸುವಂತೆ ಮಹಾರಾಷ್ಟ್ರ ಸರಕಾರಕ್ಕೆ ಒತ್ತಡ ಹೇರಬೇಕು. ನಲಿಕಲಿ ಸಾಮಗ್ರಿಗಳನ್ನು ಹೊರ ರಾಜ್ಯದ ಕನ್ನಡ ಮಕ್ಕಳಿಗೂ ನೀಡಬೇಕು ಎಂದು ಒತ್ತಾಯಿಸಿದರು. ಕರ್ನಾಟಕದಲ್ಲಿರುವ ಮರಾಠಿ ಭಾಷಿಕರಿಗೆ ನೀಡುತ್ತಿರುವ ಶಿಕ್ಷಣ, ಉದ್ಯೋಗದಲ್ಲಿನ ಮೀಸಲಾತಿ ಸೌಲಭ್ಯಗಳನ್ನು ಮಹಾರಾಷ್ಟ್ರದಲ್ಲಿರುವ ಕನ್ನಡಿಗರಿಗೂ ನೀಡುವಂತೆ ಜತ್ತ ಕನ್ನಡಿಗರು ಆಗ್ರಹಿಸಿದರು.
Join The Telegram | Join The WhatsApp |