ಬೆಳಗಾವಿ : ಬೆಳಗಾವಿಯ ಬಿಲ್ಲವರ ಅಸೋಸಿಯೇಷನ್ ವತಿಯಿಂದ ಬೆಳಗಾವಿಯಲ್ಲಿಂದು ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ ಮತ್ತು ಪ್ರತಿಭಾ ಪುರಸ್ಕಾರ ಸಮಾರಂಭವನ್ನು ನಗರದ ಕುಮಾರಗಂಧರ್ವ ರಂಗ ಮಂದಿರ ಸಭಾಗ್ರಹದಲ್ಲಿ ಏರ್ಪಡಿಸಲಾಗಿದೆ.

ಬೆಳಗ್ಗೆ 9:30ಕ್ಕೆ ಭಜನೆ, 10:30 ಕ್ಕೆ ಗುರು ಪೂಜೆ, 11 ಕ್ಕೆ ಸಭಾ ಕಾರ್ಯಕ್ರನ, 11:30 ಕ್ಕೆ ವಿದ್ಯಾರ್ಥಿ ವೇತನ ವಿತರಣೆ ನಡೆಯಲಿದೆ. ನಂತರ ನಡೆಯುವ ಕಾರ್ಯಕ್ರಮದಲ್ಲಿ ನಿಪ್ಪಾಣಿ ಓಂ ಶಕ್ತಿ ದೇವಸ್ಥಾನ ಪೀಠದ ಮಹಾಕಾಳಿ ಮಹಾಸಂಸ್ಥಾನದ ಶ್ರೀ ಅರುಣಾನಂದ ತೀರ್ಥ ಸ್ವಾಮೀಜಿ ಅವರು ಆಶೀರ್ವಚನ ನೀಡಲಿದ್ದಾರೆ. ನಾರಾಯಣ ಗುರುಗಳ ಚಿಂತನೆ ಮತ್ತು ಪ್ರಸ್ತುತತೆ ವಿಷಯವಾಗಿ ಮಲ್ಲಮ್ಮ ಯಾತಗಲ್ ಅವರು ಉಪನ್ಯಾಸ ನೀಡುವರು. ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ಮಹಿಳಾ ಮಂಡಳ ಹಾಗೂ ಬಿಲ್ಲವರ ಅಸೋಸಿಯೇಷನ್ ಯುವ ಘಟಕಗಳು ಮನವಿ ಮಾಡಿವೆ.