ಬೆಳಗಾವಿ : ಬೆಳಗಾವಿ ಜಿಲ್ಲೆಯಲ್ಲಿ ಸುರಿಯುತ್ತಿರುವ ವಿಪರೀತ ಮಳೆಯ ಕಾರಣಕ್ಕೆ ಜುಲೈ 29ರ ಸೋಮವಾರ ಮತ್ತು ಜುಲೈ 30ರ ಮಂಗಳವಾರದಂದು ನಿರ್ದಿಷ್ಟ ಶಾಲೆಗಳಿಗೆ ಮಾತ್ರ ರಜೆ ಘೋಷಣೆ ಮಾಡಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಶನ್ ಆದೇಶ ಹೊರಡಿಸಿದ್ದಾರೆ.
ಗೋಕಾಕ ಮತ್ತು ಮೂಡಲಗಿ ತಾಲ್ಲೂಕುಗಳಲ್ಲಿ ಮಾತ್ರ ಅಂಗನವಾಡಿ ಕೇಂದ್ರಗಳು, ಎಲ್ಲ ಸರಕಾರಿ, ಅನುದಾನಿತ ಮತ್ತು ಅನುದಾನರಹಿತ ಪ್ರಾಥಮಿಕ, ಪ್ರೌಢಶಾಲೆಗಳಿಗೆ ಸೋಮವಾರ (ಜುಲೈ 29) ಹಾಗೂ ಮಂಗಳವಾರ (ಜುಲೈ 30) ರಜೆ ಘೋಷಿಸಲಾಗಿದೆ.
ನಿಪ್ಪಾಣಿ, ಹುಕ್ಕೇರಿ, ಕಾಗವಾಡ ಮತ್ತು ಚಿಕ್ಕೋಡಿ ತಾಲೂಕುಗಳ ಕೆಲ ನಿರ್ದಿಷ್ಟ ಶಾಲೆಗಳಿಗೆ ಮಾತ್ರ ರಜೆ ಘೋಷಣೆ ಮಾಡಿ ಆದೇಶ ಹೊರಡಿಸಲಾಗಿದೆ.
*ಗೋಕಾಕ, ಮೂಡಲಗಿ ತಾಲ್ಲೂಕಿನ ಶಾಲೆಗಳಿಗೆ ಜು.29 ಹಾಗೂ 30 ರಂದು ರಜೆ ಘೋಷಣೆ*
——————————–
ನಿಪ್ಪಾಣಿ, ಹುಕ್ಕೇರಿ, ಕಾಗವಾಡ ಹಾಗೂ ಚಿಕ್ಕೋಡಿ ತಾಲ್ಲೂಕುಗಳ ಆಯ್ದ ಗ್ರಾಮಗಳ ಶಾಲೆಗಳಿಗೆ ಮಾತ್ರ ರಜೆಬೆಳಗಾವಿ: ವ್ಯಾಪಕ ಮಳೆಯ ಹಿನ್ನೆಲೆಯಲ್ಲಿ ಗೋಕಾಕ ಮತ್ತು ಮೂಡಲಗಿ ತಾಲ್ಲೂಕುಗಳಲ್ಲಿ ಮಾತ್ರ ಅಂಗನವಾಡಿ ಕೇಂದ್ರಗಳು, ಎಲ್ಲ ಸರಕಾರಿ, ಅನುದಾನಿತ ಮತ್ತು ಅನುದಾನರಹಿತ ಪ್ರಾಥಮಿಕ, ಪ್ರೌಢಶಾಲೆಗಳಿಗೆ ಸೋಮವಾರ (ಜುಲೈ 29) ಹಾಗೂ ಮಂಗಳವಾರ (ಜುಲೈ 30) ರಜೆ ಘೋಷಿಸಲಾಗಿರುತ್ತದೆ.
ಇನ್ನುಳಿದಂತೆ ನಿಪ್ಪಾಣಿಯ ಸಿದ್ನಾಳ, ಹುನ್ನರಗಿ, ಕುನ್ನೂರ, ಮಮದಾಪುರ ಕೆ.ಎಲ್., ಬಾರವಾಡ, ಕಾರದಗಾ ಗ್ರಾಮಗಳು;
ಹುಕ್ಕೇರಿ ತಾಲ್ಲೂಕಿನ ಸಂಕೇಶ್ವರ, ಹೊಸೂರ ಮತ್ತು ಬಡಕುಂದ್ರಿ ಗ್ರಾಮಗಳು
ಕಾಗವಾಡ ತಾಲ್ಲೂಕಿನ ಜೂಗೂಳ, ಶಾಪುರ, ಮಂಗಾವತಿ, ಕೃಷ್ಣಾ ಕಿತ್ತೂರ, ಕಾತ್ರಾಳ ಮತ್ತು ಬನಜವಾಡ ಗ್ರಾಮಗಳು
ಚಿಕ್ಕೋಡಿ ತಾಲ್ಲೂಕಿನ ಇಂಗಳಿ, ಜನವಾಡ, ಕಲ್ಲೋಳ ಹಾಗೂ ಅಂಕಲಿ ಗ್ರಾಮಗಳ ಶಾಲೆಗಳಿಗೆ ಮಾತ್ರ ಜುಲೈ 29 ಮತ್ತು ಜುಲೈ 30 ರಂದು ರಜೆಯನ್ನು ಘೋಷಿಸಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಆದೇಶ ಹೊರಡಿಸಿದ್ದಾರೆ.