ಚೆನ್ನೈ : ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಎಂ.ಎಸ್. ಧೋನಿ ಕೊನೆಗೂ ನಾಯಕನ ಸ್ಥಾನವನ್ನು ತ್ಯಜಿಸಿದ್ದಾರೆ. ಋತುರಾಜ್ ಗಾಯಕವಾಡ್ ನೂತನ ನಾಯಕನಾಗಿ ನೇಮಕಗೊಂಡಿದ್ದಾರೆ. ಧೋನಿ ರಾಜೀನಾಮೆಯನ್ನು ಸಾಮಾಜಿಕ ಜಾಲತಾಣದಲ್ಲಿ ಅಧಿಕೃತವಾಗಿ ಪ್ರಕಟಿಸಿದ್ದು ಸಿ ಎಸ್ ಕೆ ನಾಯಕನಾಗಿ ಯುವ ಆರಂಭಿಕ ಆಟಗಾರ ಋತುರಾಜ್ ಗಾಯಕವಾಡ ಅವರನ್ನು ನೇಮಕ ಮಾಡಲಾಗಿದೆ.