ಕಾರವಾರ : ಹಲವು ತಿಂಗಳ ಹಿಂದೆ ಅಂಕೋಲಾ ತಾಲೂಕು ಶಿರೂರು ಗುಡ್ಡ ಕುಸಿತದಲ್ಲಿ ನದಿ ನೀರು ಪಾಲಾಗಿದ್ದ ಕೇರಳದ ಅರ್ಜುನನ ಲಾರಿ ಕೊನೆಗೂ ಪತ್ತೆಯಾಗಿದೆ. ಮೂರನೇ ಹಂತದ ಕಾರ್ಯಾಚರಣೆ ನಡೆಯುತ್ತಿರುವ ಗುಡ್ಡ ಕುಸಿತದ ಸ್ಥಳದಲ್ಲೇ ಇದು ಪತ್ತೆಯಾಗಿದೆ. ಖ್ಯಾತ ಮುಳುಗುತಜ್ಞರಾಗಿರುವ ಈಶ್ವರ್ ಮಲ್ಪೆ ಕಾರ್ಯಾಚರಣೆ ನಡೆಸುತ್ತಿರುವ ಸಂದರ್ಭದಲ್ಲಿ ಲಾರಿ ಚಕ್ರ ಮೊದಲಿಗೆ ಕಂಡುಬಂದಿದೆ. ಲಾರಿ ತಲೆ ಕೆಳಗಾದ ಸ್ಥಿತಿಯಲ್ಲಿ ನೀರಿನಲ್ಲಿ ಮುಳುಗಿದ್ದು ಲಾರಿ ಚಕ್ರಕ್ಕೆ ಈಶ್ವರ ಮಲ್ಪೆ ಹಗ್ಗ ಕಟ್ಟಿ ಬಂದಿರುವ ಬಗ್ಗೆ ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ. ಲಾರಿ ನೀರಿನಲ್ಲಿ ಮುಳುಗಿದ ವಿಷಯ ಇಡೀ ದೇಶಾದ್ಯಂತ ಭಾರಿ ಪ್ರಚಾರ ಪಡೆದುಕೊಂಡಿತ್ತು. ಕೇರಳ ಸರ್ಕಾರ ಈ ಬಗ್ಗೆ ಸಚಿವರನ್ನು ಘಟನೆ ನಡೆದ ಸ್ಥಳಕ್ಕೆ ಕಳುಹಿಸಿದ್ದು ಮಾತ್ರವಲ್ಲ ಕೇರಳದ ಮಾಧ್ಯಮಗಳ ದಂಡೆ ಘಟನಾ ಸ್ಥಳಕ್ಕೆ ಆಗಮಿಸಿ ಘಟನೆಯನ್ನು ಬಿತ್ತರಿಸಿದ್ದವು.