ದೆಹಲಿ : ಖಾಸಗಿ ಟೆಲಿಕಾಂ ಕಂಪನಿಗಳ ಅಬ್ಬರದಲ್ಲಿ ನಲುಗಿದ್ದ ಭಾರತ ಸಂಚಾರ ನಿಗಮ್ ಲಿಮಿಟೆಡ್ (ಬಿಎಸ್ಎನ್ಎಲ್) ಇದೀಗ ಶುಕ್ರದೆಸೆ ಕಾಣುತ್ತಿದೆ. ಒಟ್ಟಾರೆ ದೇಶದಲ್ಲಿ ಇದೀಗ ಬಿಎಸ್ಎನ್ಎಲ್ ಅಬ್ಬರ ಕಂಡು ಬಂದಿದೆ.

ಖಾಸಗಿ ವಲಯದ ಟೆಲಿಕಾಂ ಕಂಪನಿಗಳು ಶುಲ್ಕವನ್ನು ಹೆಚ್ಚಿಸಿರುವುದರಿಂದ BSNL ಜನಪ್ರಿಯತೆ ಗಳಿಸುತ್ತಿದೆ. ಈ ತಿಂಗಳ 3 ಮತ್ತು 4 ರಂದು ಖಾಸಗಿ ಆಪರೇಟರ್‌ಗಳ ಶುಲ್ಕವನ್ನು ಘೋಷಿಸಿದ ನಂತರ BSNL ಚಂದಾದಾರರು ಹೆಚ್ಚಾಗಲು ಪ್ರಾರಂಭಿಸಿದರು. ಕಳೆದ 2 ವಾರಗಳಲ್ಲಿ ಪೋರ್ಟಬಿಲಿಟಿ ಮೂಲಕ 2.5 ಲಕ್ಷ ಮಂದಿ & ಹೊಸ ಸಂಪರ್ಕಗಳ ಮೂಲಕ 25 ಲಕ್ಷ ಮಂದಿ ಸಂಸ್ಥೆಗೆ ಬಂದಿದ್ದಾರೆ ಎಂದು ಎಕನಾಮಿಕ್ ಟೈಮ್ಸ್ ಲೇಖನವೊಂದರಲ್ಲಿ ಹೇಳಿದೆ. BSNL ಕೇವಲ ₹108ಕ್ಕೆ ಅನಿಯಮಿತ ಕರೆಗಳು & ಡೇಟಾವನ್ನು ಹೊಂದಿದೆ.