This is the title of the web page
This is the title of the web page

Live Stream

March 2023
S M T W T F S
 1234
567891011
12131415161718
19202122232425
262728293031  

| Latest Version 9.4.1 |

State News

ಮಕರ ಸಂಕ್ರಾಂತಿ ಪ್ರಯುಕ್ತ ಎಮ್ಮೆ ಓಡಿಸುವ ಸ್ಪರ್ಧೆ ಯಶಸ್ವಿ !

Join The Telegram Join The WhatsApp

ರೈತರ ಖುಷಿಯೇ ದೇಶದ ಜನರ ಖುಷಿ. ರೈತರು ಖುಷಿಯಿಂದ ಇದ್ದರೆ ದೇಶ ಸುಭಿಕ್ಷವಾಗಿರಲು ಸಾಧ್ಯ. ರೈತರಿಗೆ ಬೆಳೆ ಹಾಗೂ ಅವರು ಸಾಕುವ ಜಾನುವಾರುಗಳು ಉತ್ತಮವಾಗಿದ್ದರೆ ಅವರ ಸಂತೋಷಕ್ಕೆ ಪಾರವೇ ಇರದು. ಈ ನಿಟ್ಟಿನಲ್ಲಿ ಅವರಿಗೆ ಸದಾ ಪ್ರೋತ್ಸಾಹ ನೀಡುವೆ : ಮುರಗೇಂದ್ರ ಗೌಡ ಪಾಟೀಲ

 

ಬೆಳಗಾವಿ :

ನಗರದ ಕುಲಕರ್ಣಿಗಲ್ಲಿಯ ಮಹಾವೀರ ಚೌಕದಲ್ಲಿ ಸಿರಿಗನ್ನಡ ಯುವಕ ಮಂಡಳದವರು ಸಂಕ್ರಾಂತಿ ಹಬ್ಬದ ಪ್ರಯುಕ್ತ ಎಮ್ಮೆ ಓಡಿಸುವ ಸ್ಪರ್ಧೆ ಹಮ್ಮಿಕೊಂಡಿದ್ದರು.

ಬೆಳಗಾವಿ ನಗರದಲ್ಲಿ ಹೈನುಗಾರಿಕೆ ಹೊಂದಿರುವ ಗೌಳಿ ಕುಟುಂಬಗಳು ನೆಲೆಸಿವೆ. ಅಂತಹ ಕುಟುಂಬಗಳು ಈ ಸ್ಪರ್ಧೆಯಲ್ಲಿ ಹೆಸರುವಾಸಿಯಾಗಿವೆ. ಎಮ್ಮೆಗಳನ್ನು ಸಾಕಿ ಹೈನುಗಾರಿಕೆ ಮಾಡಿಕೊಂಡ ಇವರು ಎಮ್ಮೆಗಳಿಂದ ಗೌರವ- ಪ್ರೀತಿಯಿಂದ ನೋಡುತ್ತಾರೆ. ದೀಪಾವಳಿ ಹಾಗೂ ವಿಶೇಷ ಹಬ್ಬದ ಸಂದರ್ಭಗಳಲ್ಲಿ ಎಮ್ಮೆ ಮತ್ತು ಕೋಣಗಳಿಗೆ ಶೃಂಗರಿಸಿ ಓಡಿಸುತ್ತಾರೆ.

ಬೈಕಿನ ಸೈರನ್ ತೆಗೆದು ಓಡಿಸುವ ವಿಶೇಷ ಕ್ರೀಡೆ ಇದಾಗಿದೆ.ಸಾಂಸ್ಕೃತಿಕ ವಾದ್ಯಗಳನ್ನು ನುಡಿಸುವ ಮೂಲಕ ಯುವಕರ ಗುಂಪು ಕುಣಿದು ಸಂಭ್ರಮಾಚರಣೆ ಮಾಡಿತು. ಬಳಿಕ ಎಮ್ಮೆಗಳ ಓಟವನ್ನು ನಡೆಸಲಾಯಿತು. ಎಮ್ಮೆಗಳು ಬೈಕ್ ಸೌಂಡ್‌ ಗೆ ಓಡುತ್ತಿದ್ದಂತೆ, ಜಮಾಯಿಸಿದ ಜನರು ಶಿಳ್ಳೆ ಹೊಡೆದು ಖುಷಿಪಟ್ಟರು.

ಎಮ್ಮೆ ಓಡಿಸುವ ಓಟದ ಸ್ಪರ್ಧೆ ಗೌಳಿಗರ ಸಾಂಪ್ರದಾಯಿಕ ಹಾಗೂ ದೇಶಿ ಕ್ರೀಡೆಯು ಆಗಿದೆ. ಈ ಹಿನ್ನೆಲೆಯಲ್ಲಿ ಬೆಳಗಾವಿಯ ಕುಲಕರ್ಣಿಗಲ್ಲಿಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಸಹಸ್ರಾರು ಜನ ಭಾಗವಹಿಸಿ ಯಶಸ್ವಿಗೊಳಿಸಿದರು. ಕರ್ನಾಟಕ, ಮಹಾರಾಷ್ಟ್ರದಿಂದ ಅನೇಕ ಎಮ್ಮೆ ಕೋಣಗಳ ತಂಡಗಳು ಆಗಮಿಸಿ ಜನರಿಗೆ ರಸದೌತಣ ನೀಡಿದವು. ಸುಮಾರು 40 ರಿಂದ 50 ತಂಡಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದವು. ವಿಜೇತ ಮೊದಲ ಮೂರು ತಂಡಗಳಿಗೆ 50,000, 30,000 ಹಾಗೂ 20,000 ನಗದು ಹಾಗೂ ಟ್ರೋಫಿ ವಿತರಿಸಲಾಯಿತು. ಮಾಜಿ ಉಪಮೇಯರ್ ಸತೀಶ್ ಗೌರಗೊಂಡಾ ಮಾತನಾಡಿ, ಇಂದಿನ ಆಧುನಿಕ ಜೀವನದಲ್ಲಿ ಸಾಂಪ್ರದಾಯಿಕ ಸಂಸ್ಕೃತಿ ಬಿಂಬಿಸುವ ಕ್ರೀಡೆಗಳ ಅವಶ್ಯಕತೆ ಇದೆ. ಈ ನಿಟ್ಟಿನಲ್ಲಿ ಇಂತಹ ಕ್ರೀಡೆಗೆ ಪ್ರೋತ್ಸಾಹ ನೀಡಿರುವ ಬಿಜೆಪಿ ನಾಯಕ ಹಾಗೂ ನ್ಯಾಯವಾದಿ ಮುರಗೇಂದ್ರ ಗೌಡ ಪಾಟೀಲ ಅವರ ಸಹಕಾರದಿಂದ ಈ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿದೆ ಎಂದರು.

ಬೆಳಗಾವಿ ಉತ್ತರ ಮತಕ್ಷೇತ್ರದಲ್ಲಿ ಯಾವುದೇ ಸಮಾಜದವರು, ಯುವಕ ಸಂಘದವರು, ಮುಖಂಡರು ಯಾವುದೇ ಸಮಾಜಮುಖಿ ಕಾರ್ಯಕ್ರಮ ಕರೆದಾಗ ಅಲ್ಲಿಗೆ ಆಗಮಿಸಿ ಸಹಕರಿಸುವ ಮುರಗೇಂದ್ರ ಗೌಡ ಪಾಟೀಲ ಅವರಂತಹ ನಾಯಕರ ಅವಶ್ಯಕತೆ ಬೆಳಗಾವಿಗೆ ಇದೆ ಎಂದು ತಿಳಿಸಿದರು.

ನ್ಯಾಯವಾದಿ ಹಾಗೂ ಸಾಮಾಜಿಕ ಕಾರ್ಯಕರ್ತ ಮುರಗೇಂದ್ರ ಗೌಡ ಪಾಟೀಲ ಮಾತನಾಡಿ, ದೇಶೀಯ ಸಾಂಪ್ರದಾಯಿಕ ಕ್ರೀಡೆಗಳು ನಮ್ಮ ಜನಜೀವನದ ಅವಿಭಾಜ್ಯ ಅಂಗವಾಗಿವೆ. ರೈತಾಪಿ ಜನರಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಇಂಥ ಕ್ರೀಡೆ ಅವಶ್ಯವಾಗಿ ನಡೆಯಬೇಕು. ಇಲ್ಲಿಯ ಯುವಕರು ಅತ್ಯಂತ ಆಸಕ್ತಿಯಿಂದ ಕಾರ್ಯಕ್ರಮ ಆಯೋಜಿಸಿದ್ದಾರೆ. ಇದು ನಮಗೆ ಅತ್ಯಂತ ಹೆಮ್ಮೆಯ ಸಂಗತಿ. ಕ್ರೀಡೆಯನ್ನು ಬೆಳೆಸುವ ಕಾರ್ಯ ನಡೆಯಬೇಕು ಎಂದು ಆಶಯ ವ್ಯಕ್ತಪಡಿಸಿದರು.


Join The Telegram Join The WhatsApp
Admin
the authorAdmin

Leave a Reply