ನವದೆಹಲಿ: ಲೋಕಸಭೆ ಚುನಾವಣೆ 2024ರ ಏಳನೇ ಮತ್ತು ಕೊನೆಯ ಹಂತವು ಶನಿವಾರ ಮುಕ್ತಾಯವಾದ ಮತಗಟ್ಟೆ ನಿರ್ಗಮನ ಸಮೀಕ್ಷೆ (Exit Poll 2024)ಗಳು ಹೊರಬಂದಿವೆ. ಇದು ಜೂನ್ 4 ರಂದು ಅಧಿಕೃತ ಎಣಿಕೆಯ ನಂತರ ಏನಾಗಲಿದೆ ಎಂಬುದರ ಕುರಿತು ನಮಗೆ ಕಲ್ಪನೆಯನ್ನು ನೀಡುತ್ತದೆ. ಎಲ್ಲ ಎಕ್ಸಿಟ್ ಪೋಲ್‌ಗಳು ಭಾರತೀಯ ಜನತಾ ಪಕ್ಷ (ಬಿಜೆಪಿ) ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್‌ಡಿಎ)ವು ಕೇಂದ್ರದಲ್ಲಿ ಮೂರನೇ ಬಾರಿಗೆ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ ಎಂದು ಹೇಳಿವೆ. ವಿಶೇಷವೆಂದರೆ ಈ ಸಲದ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಹಾಗೂ ಎನ್‌ಡಿಎ ದಕ್ಷಿಣ ಭಾರತದಲ್ಲಿ ಹೆಚ್ಚು ಸ್ಥಾನಗಳನ್ನು ಪಡೆಯಲಿದೆ ಹಾಗೂ ಇವುಗಳ ಸ್ಥಾನಗಳ ಸಂಖ್ಯೆ ಅರ್ಧ ಶತಕ ದಾಟಲಿದೆ ಎಂದು ಅಂದಾಜಿಸಿವೆ. ಬಿಜೆಪಿಯು ದಕ್ಷಿಣ ಭಾರತದ ರಾಜ್ಯಗಳಿಂದ ದೊಡ್ಡ ಲಾಭ ಪಡೆಯುತ್ತದೆ ಎಂದು ಎಕ್ಸಿಟ್‌ ಪೋಲ್‌ಗಳು ಹೇಳಿರುವುದು ವಿಪಕ್ಷಗಳ ಮೈತ್ರಿಕೂಟವಾದ ಇಂಡಿಯಾ ಬಣಕ್ಕೆ ಕೆಟ್ಟ ಸುದ್ದಿಯಾಗಿದೆ.

ಯಾವ್ಯಾವ ಎಕ್ಸಿಟ್‌ ಪೋಲ್‌ಗಳು ಏನು ಹೇಳಿವೆ ಎಂಬುದು ಇಲ್ಲಿದೆ.

ಆಕ್ಸಿಸ್ ಮೈ ಇಂಡಿಯಾ ಎಕ್ಸಿಟ್ ಪೋಲ್ 2024

ಕರ್ನಾಟಕ- ಬಿಜೆಪಿ : 20-22, ಜೆಡಿಎಸ್: 2-3, ಕಾಂಗ್ರೆಸ್: 3-5 (ಒಟ್ಟು ಸ್ಥಾನಗಳು 28)

ತಮಿಳುನಾಡು- BJP: 1-3, ಡಿಎಂಕೆ: 20-22, ಕಾಂಗ್ರೆಸ್: 6-8, ಎಐಎಡಿಎಂಕೆ: 21 (ಒಟ್ಟು ಸ್ಥಾನಗಳು 39).

ಕೇರಳ- ಕಾಂಗ್ರೆಸ್: 13-14, ಬಿಜೆಪಿ: 2-3, ಯುಡಿಎಫ್ 4 (ಒಟ್ಟು ಸ್ಥಾನಗಳು 20).

ಆಂಧ್ರ ಪ್ರದೇಶ- ಎನ್‌ಡಿಎ (ಬಿಜೆಪಿ+ಟಿಡಿಪಿ+ಜನಸೇನಾ) : 21-23, ವೈಎಸ್‌ಆರ್‌ಸಿಪಿ (YSRCP): 2-4 (ಒಟ್ಟು ಸ್ಥಾನಗಳು 25)

ತೆಲಂಗಾಣ- ಬಿಜೆಪಿ: 11-12, BRS: 0-1, ಕಾಂಗ್ರೆಸ್: 8-12, ಇತರೆ: 0 (ಒಟ್ಟು 17)
ಎಬಿಪಿ-ಸಿ ವೋಟರ್‌ (ABP-CVoter) ಎಕ್ಸಿಟ್ ಪೋಲ್ 2024

ಕರ್ನಾಟಕ- ಎನ್‌ಡಿಎ (ಬಿಜೆಪಿ+ಜೆಡಿಎಸ್‌) : 23-25 ​​ಸ್ಥಾನಗಳು, ಕಾಂಗ್ರೆಸ್‌: 3-5 ಸ್ಥಾನಗಳು

ಆಂಧ್ರಪ್ರದೇಶ- ಬಿಜೆಪಿ: 21-25, ವೈಎಸ್‌ಆರ್‌ಸಿಪಿ: 0-4

ತೆಲಂಗಾಣ- ಬಿಜೆಪಿ: 7-9, ಕಾಂಗ್ರೆಸ್: 7-9, ಎಐಎಂಐಎಂ 1.

ಕೇರಳ- ಯುಡಿಎಫ್: 17-19, ಎಲ್‌ಡಿಎಫ್‌: 0, ಎನ್‌ಡಿಎ : 1-3

ತಮಿಳುನಾಡು- ಇಂಡಿಯಾ ಮೈತ್ರಿಕೂಟ: 37-39, ಎನ್‌ಡಿಎ: 0-2, ಇತರೆ 0

ಟಿವಿ9 (TV9) ಭಾರತ ವರ್ಷ – ಪೋಲ್‌ಸ್ಟಾರ್ಟ್
ಕರ್ನಾಟಕ- ಎನ್‌ಡಿಎ : 20, ಕಾಂಗ್ರೆಸ್: 8, ಇತರೆ: 0

ತಮಿಳುನಾಡು- ಎನ್‌ಡಿಎ: 4, ಇಂಡಿಯಾ ಮೈತ್ರಿಕೂಟ: 35, ಇತರೆ: 0

ಆಂಧ್ರಪ್ರದೇಶ- ಎನ್‌ಡಿಎ: 12, ವೈಎಸ್‌ಆರ್‌ಸಿಪಿ: 13
ಕೇರಳ- ಯುಡಿಎಫ್: 16, ಎನ್‌ಡಿಎ: 1, ಎಲ್‌ಡಿಎಫ್‌: 3

ತೆಲಂಗಾಣ- ಕಾಂಗ್ರೆಸ್: 8, ಬಿಜೆಪಿ: 7, ಬಿಆರ್‌ಎಸ್‌: 1, ಎಐಎಂಐಎಂ: 1

ಟುಡೆ ಚಾಣಕ್ಯ ಎಕ್ಸಿಟ್ ಪೋಲ್ 2024
ಕರ್ನಾಟಕ- ಎನ್‌ಡಿಎ : 24, ಕಾಂಗ್ರೆಸ್: 4, ಇತರೆ: 0
ತೆಲಂಗಾಣ- ಬಿಜೆಪಿ: 12, ಕಾಂಗ್ರೆಸ್ 5, ಬಿಆರ್‌ಎಸ್: 0, ಇತರೆ: 0

ಆಂಧ್ರಪ್ರದೇಶ- ಎನ್‌ಡಿಎ: 22, ವೈಎಸ್‌ಆರ್‌ಸಿಪಿ: 3, ಇತರೆ: 0
ಕೇರಳ- ಯುಡಿಎಫ್: 15, ಎಲ್‌ಡಿಎಫ್‌: 1, ಬಿಜೆಪಿ: 4.

ತಮಿಳುನಾಡು- ಡಿಎಂಕೆ: 29, ಬಿಜೆಪಿ: 10, ಎಐಎಡಿಎಂಕೆ: 0.
ನ್ಯೂಸ್‌ 18 ಎಕ್ಸಿಟ್‌ ಪೋಲ್‌
ಕರ್ನಾಟಕ-ಎನ್‌ಡಿಎ-23-26, ಕಾಂಗ್ರೆಸ್‌ 3-7, ಇತರೆ 0

ಕೇರಳ- ಎನ್‌ಡಿಎ ; 1-3, ಕಾಂಗ್ರೆಸ್‌ : 15-18, ಎಲ್‌ಡಿಎಫ್‌: 2-5
ತಮಿಳುನಾಡು- ಬಿಜೆಪಿ: 1-3 ಇಂಡಿಯಾ ಮೈತ್ರಿಕೂಟ : 36-39 ಇತರೆ: 0-2

ಆಂಧ್ರಪ್ರದೇಶ -ಎನ್‌ಡಿಎ: 19-22 ವೈಎಸ್‌ಆರ್‌ಸಿಪಿ : 5-8 ಇತರೆ : 0
ತೆಲಂಗಾಣ – ಬಿಜೆಪಿ : 7-10 ಕಾಂಗ್ರೆಸ್‌ : 5-8