ಸಿಂಧನೂರು: ಸಿಂಧನೂರು ಶಾಸಕ ಹಂಪನಗೌಡ ಬಾದರ್ಲಿ ಅವರ ಮನೆಯಲ್ಲಿ ಕಳ್ಳತನ ನಡೆದಿರುವ ಘಟನೆ ನಡೆದಿದೆ. ನಗರದ ಬೈಪಾಸ್ ಸಮೀಪ ಕೃಷ್ಣ ಮೆಡೂಸ್ ಬಡಾವಣೆಯಲ್ಲಿ ಅವರ ಮನೆ ಇದೆ.

ಶಾಸಕರ ಮನೆಯಲ್ಲಿ ಯಾರು ಇಲ್ಲದ ಸಂದರ್ಭವನ್ನು ಅರಿತ ಕಳ್ಳರು ಮನೆಯ ಬೀಗ ಮುರಿದು ನುಗ್ಗಿ ಕಳ್ಳತನಕ್ಕೆ ಪ್ರಯತ್ನಿಸಿದ್ದಾರೆ. ಈ ಸಂಬಂಧ ಶಾಸಕರ ಸಂಬಂಧಿಯಾಗಿರುವ ಅನಿಲ್ ಪಾಟೀಲ ಅವರು ನೀಡಿರುವ ದೂರಿನ ಮೇರೆಗೆ ಪೊಲೀಸರು ಆಗಮಿಸಿ ಸ್ಥಳ ಪರಿಶೀಲನೆ ನಡೆಸಿದ್ದಾರೆ.