ಹಾಂಕಾಂಗ್: ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಸ್ಪಷ್ಟ ಬಹುಮತ ಪಡೆದು ನರೇಂದ್ರ ಮೋದಿ ಮತ್ತೊಮ್ಮೆ ದೇಶದ ಪ್ರಧಾನಿಯಾಗಲಿ ಎಂದು ವಿಜಯಪುರ ಜಿಲ್ಲೆ ಯುವಕರು ಹಾಂಕಾಂಗ್ ಬಾಹ್ಯಾಕಾಶದಿಂದ

ಸ್ಕೈ ಡೈವಿಂಗ್ ಮೂಲಕ ವಿಭಿನ್ನ ಪ್ರಚಾರ ಮಾಡಿ ಇದೀಗ ಗಮನ ಸೆಳೆದಿದ್ದಾರೆ.

ರಾಜಶೇಖರ ಮುತ್ತಿನ ಪೆಂಡಿಮಠ ಅವರ ನೇತೃತ್ವದಲ್ಲಿ ಅನುಭವ ಅಗರವಾಲ್, ರಾಹುಲ್ ಡಾಕರೆ, ಹಿಮಾಂಶು ಅವರಿದ್ದ ತಂಡ ವಿದೇಶದ ಹಾಂಕಾಂಗನ ಡ್ರಾಪ್
ಝೋನ್ ನಿಂದ ನಮೋ 2.0 ಬಾವುಟ ಹಿಡಿದು 13,000 ಅಡಿ ಎತ್ತರದಿಂದ ಸ್ಕೈ ಡೈವಿಂಗ್ ಮಾಡಿ ಇದೀಗ ಗಮನ ಸೆಳೆದಿದ್ದಾರೆ.

ನಾಲ್ವರು ಯುವಕರು ಅಯೋಧ್ಯೆ ಶ್ರೀರಾಮ ಪ್ರಾಣ ಪ್ರತಿಷ್ಠಾಪನೆ ವೇಳೆಯೂ ಸ್ಕೈ ಡೈವಿಂಗ್​ ಮಾಡಿದ್ದರು. ಕೈಯ್ಯಲ್ಲಿ ಜೈ ಶ್ರೀರಾಮ ಎಂದು ಬರೆದಿರುವ ಮತ್ತು ರಾಮ ಮಂದಿರದ ಫೋಟೋ ಇರುವ ಬ್ಯಾನರ್ ಹಿಡಿದು ಸ್ಕೈ ಡೈವಿಂಗ್ ಮೂಲಕ 13 ಸಾವಿರ ಅಡಿಯ ಮೇಲಿನಿಂದ ಜೈ ಶ್ರೀ ರಾಮ್ ಎಂದು ಧುಮುಕಿದ್ದಾರೆ.