ಅಮಾಸೆಬೈಲು : ಶಾಲಾವಾರ್ಷಿಕೋತ್ಸವಗಳು ಮಕ್ಕಳ ಪ್ರತಿಭೆಗಳನ್ನು ಹೆಚ್ಚಿಸುವುದರೊಂದಿಗೆ ಶಾಲೆಗಳ ಪ್ರಗತಿಗೆ ಸಹಕಾರಿಯಾಗಲಿವೆ. ಸರ್ಕಾರಿ ಶಾಲೆಗಳಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣಕ್ಕೆ ಅವಕಾಶಗಳಿರುವುದರಿಂದ ಶಾಲೆಗಳನ್ನುಉಳಿಸಿ ಬೆಳೆಸುವಲ್ಲಿ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಕ್ಯಾಂಪ್ಕೋ ಲಿ.ಮಂಗಳೂರು ಅಧ್ಯಕ್ಷ ಎ..ಕಿಶೋರ್‌ಕುಮಾರ್ ಕೊಡ್ಗಿ ಹೇಳಿದರು.
ಅವರು ಅಮಾಸೆಬೈಲು ಸಮೀಪದ ನಡಬೂರು ಸರ್ಕಾರಿ ಕಿರಿಯ
ಪ್ರಾಥಮಿಕ ಶಾಲೆಯಲ್ಲಿ ಶಾಲಾ ವಾರ್ಷಿಕೋತ್ಸವ, ನಿನಾದ ಚಿಣ್ಣರ
ಕಲರವ ಸಂಭ್ರಮಾಚರಣೆ ಕಾರ್ಯಕ್ರಮವನ್ನು
ಉದ್ಘಾಟಿಸಿ ಮಾತನಾಡಿದರು.ಕುಂದಾಪುರ ಶಾಸಕ ಎ.ಕಿರಣ್‌ಕುಮಾರ್ ಕೊಡ್ಗಿ ಸ್ಮಾರ್ಟ್ ಕ್ಲಾಸ್
ಉದ್ಘಾಟಿಸಿದರು. ಅಮಾಸೆಬೈಲು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಲ್ಲಿಕಾ
ಕುಲಾಲ,ಸದಸ್ಯ ಕಿರಣ್‌ಕುಮಾರ್ ಶೆಟ್ಟಿ,ಕೃಷ್ಣಕುಮಾರ, ಸದಸ್ಯೆ ಮಮತಾ,ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕುಂದಾಪುರ ವಲಯಾಧ್ಯಕ್ಷ ಗಣೇಶ್‌ಕುಮಾರ್ ಶೆಟ್ಟಿ,
ಉಪಾಧ್ಯಕ್ಷ ಶಶಿಧರ ಶೆಟ್ಟಿ, ಹಾಲಾಡಿ ವೃತ್ತ ಶಿಕ್ಷಣ ಸಂಯೋಜಕ ಶೇಖರ್ ಯು, ಸಮೂಹ ಸಂಪನ್ಮೂಲ ವ್ಯಕ್ತಿ ಪ್ರಭಾಕರ
ಶೆಟ್ಟಿ,ದಾನಿ ಚಿತ್ತರಂಜನ್ ರಾವ್ ಮಾವಿನಕಾಡು,ಶಾಲಾ ವಾರ್ಷಿಕೋತ್ಸವ
ಸಮಿತಿ ಅಧ್ಯಕ್ಷ ಶಂಕರನಾರಾಯಣ
ಉಳ್ಳೂರು,ಗೌರವಾಧ್ಯಕ್ಷ ವಿಷ್ಣುಮೂರ್ತಿ ರಾವ್, ಹಳೆ ವಿದ್ಯಾರ್ಥಿ
ಸಂಘದ ಅಧ್ಯಕ್ಷ ಕಿರಣ್‌ಕುಮಾರ್ ಶೆಟ್ಟಿ,ಎಸ್‌ಡಿಎಂಸಿ ಅಧ್ಯಕ್ಷೆ
ಶ್ವೇತಾ, ಮುಖ್ಯ ಶಿಕ್ಷಕಿ ಶ್ರೀಲತಾ, ವಿದ್ಯಾರ್ಥಿ ನಾಯಕ ಆರ್ಯ ಆರ್ ಶೆಟ್ಟಿ ಹಾಗೂ ಇನ್ನಿತರರು ಉಪಸ್ಥಿತರಿದ್ದರು.
ಕೋಟೇಶ್ವರ ಗೀತಾ ಎಚ್.ಎಸ್.ಎನ್ ಫೌಂಡೇಶನ್ ಅಧ್ಯಕ್ಷ ಶಂಕರ ಐತಾಳ್ ಅಮಾಸೆಬೈಲು,ದಾನಿ ಶಬರಿ ಶೆಟ್ಟಿ ಪರವಾಗಿ ರಮಾನಂದ ಪ್ರೇಮಾ ಶೆಟ್ಟಿ ಕೊಟ್ಟಕ್ಕಿ ಇವರನ್ನು
ಸನ್ಮಾನಿಸಲಾಯಿತು. ಶಾಲೆಯಲ್ಲಿ ಸೇವೆ ಸಲ್ಲಿಸಿದ ನಿವೃತ್ತ ಮುಖ್ಯ ಶಿಕ್ಷಕರಾದ ಗೋಪಾಲ ಶೆಟ್ಟಿ ನೈಲಾಡಿ,ಜನಾರ್ದನ ಶೆಟ್ಟಿಗಾರ್ ವಕ್ವಾಡಿ, ಶ್ರೀಧರ ಶೆಟ್ಟಿ ಹೆಂಗವಳ್ಳಿ, ಸುಧಾಕರ ಶೆಟ್ಟಿ
ಕೊಟ್ಟಕ್ಕಿ,ರಘುರಾಮ ರೈ ಹೆಂಗವಳ್ಳಿ ಇವರಿಗೆ ಗುರು ನಮನ, ಶಾಲೆಯಲ್ಲಿ ಸೇವೆ ಸಲ್ಲಿಸಿದ ಶಿಕ್ಷಕರು, ನಿಯೋಜಿತ
ಶಿಕ್ಷಕರು ಹಾಗೂ ಅತಿಥಿ ಶಿಕ್ಷಕ ವೃಂದವರನ್ನು ಸನ್ಮಾನಿಸಲಾಯಿತು.
ಬಹುಮಾನ ವಿತರಣೆ,ಪ್ರತಿಭಾ ಪುರಸ್ಕಾರ,ಅಂಗನವಾಡಿ
ಮತ್ತು ಶಾಲಾ ವಿದ್ಯಾರ್ಥಿಗಳಿಂದ ವೈವಿಧ್ಯಮಯ ಸಾಂಸ್ಕೃತಿಕ
ಕಾರ್ಯಕ್ರಮಗಳು, ಶಾಲಾ ವಿದ್ಯಾರ್ಥಿಗಳಿಂದ “ಶ್ರೀಕೃಷ್ಣ
ತುಲಾಭಾರ” ಪೌರಾಣಿಕ ನಾಟಕ, ಶಾಲಾ ಹಳೆ ವಿದ್ಯಾರ್ಥಿಗಳು
ಹಾಗೂ ಊರ ಕಲಾವಿದರಿಂದ ವಿವಿಧ ಮನೋರಂಜನಾ ಕಾರ್ಯಕ್ರಮ ನಡೆಯಿತು. ಮುಖ್ಯ ಶಿಕ್ಷಕಿ ಶ್ರೀಲತಾ ಸ್ವಾಗತಿಸಿದರು, ಶಿಕ್ಷಕಿ ಜ್ಯೋತಿ ನಿರೂಪಿಸಿದರು.ಶಿಕ್ಷಕಿ ದೀಪಿಕಾ ನಾಯರ್ ವಂದಿಸಿದರು.