ಬೆಳಗಾವಿ: ಗೆಣಸು ತುಂಬಲು ಹೊರಟಿದ್ದ ಕ್ಯಾಂಟರ್ ರಕ್ಕಸಕೊಪ್ಪ ಜಲಾಶಯಕ್ಕೆ ಬಿದ್ದಿದೆ. ಚಾಲಕ ಕ್ಯಾಂಟರ್ ನಿಂದ ಹೊರಗೆ ಜಿಗಿದಿದ್ದಾನೆ. ಕ್ಯಾಂಟರ್ ಅನ್ನು ಮೇಲೆ ಎತ್ತುವ ಕಾರ್ಯ ಗುರುವಾರ ನಡೆಯಲಿದೆ.
ಸೋನೋಳಿ ಗ್ರಾಮದ ಮಹೇಶ್ ಜಂಗರುಚೆ ಕ್ಯಾಂಟರ್ ತೆಗೆದುಕೊಂಡು ರೈತರ ಬಳಿ ಇರುವ ಗೆಣಸು ತುಂಬಲು ಬುಧವಾರ ಸಂಜೆ 5:30 ರ ಸುಮಾರಿಗೆ ರಕ್ಕಸಕೊಪ್ಪ ಬಳಿಯ ಕಚ್ಚಾ ರಸ್ತೆಯಲ್ಲಿ ಪ್ರಯಾಣಿಸುವಾಗ ಕ್ಯಾಂಟರ್ ನ ಕ್ಲಚ್ ಸಮಸ್ಯೆಯಿಂದ ಡ್ಯಾಮಿನ ನೀರಿಗೆ ಬಿದ್ದಿದೆ. ಚಾಲಕ ಮಹೇಶ್ ತಕ್ಷಣ ಜಿಗಿದ ಕಾರಣ ಪ್ರಾಣ ಹಾನಿ ಆಗಿಲ್ಲ. ರಕ್ಷಣಾ ತಂಡ ಸ್ಥಳಕ್ಕೆ ಆಗಮಿಸಿದೆಯಾದರೂ ರಾತ್ರಿಯಾದ ಕಾರಣ ಕಾರ್ಯಾಚರಣೆ ಮಾಡಲು ಆಗಿಲ್ಲ. ಬೆಳಗಾವಿ ಗ್ರಾಮೀಣ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು ಗುರುವಾರದಂದು ಕ್ಯಾಂಟರ್ ಮೇಲೆತ್ತುವ ಕಾರ್ಯಾಚರಣೆ ನಡೆಯಲಿದೆ.