ಬೆಳಗಾವಿ: ಬಿಜಗರ್ಣಿಯ ರಕ್ಕಸಕೊಪ್ಪ ರಸ್ತೆಯಲ್ಲಿ ಸೋಮವಾರ ಕಾರು ಪಲ್ಟಿಗೊಂಡು ಮೂವರು ಯುವಕರು ಗಾಯಗೊಂಡ ಘಟನೆ ಬೆಳಕಿಗೆ ಬಂದಿದೆ. ನಾಲ್ವರು ಸ್ನೇಹಿತರು ಹೋಳಿ ಹಬ್ಬ ಆಚರಣೆ ಸಂದರ್ಭದಲ್ಲಿ ಕಾರಿನಲ್ಲಿ ಹೊರಟಿದ್ದ ವೇಳೆ ನಿಯಂತ್ರಣ ತಪ್ಪಿದ ಕಾರು ಮರಕ್ಕೆ ಡಿಕ್ಕಿ ಹೊಡೆದು ಮಗುಚಿದೆ. ಘಟನೆ ತಿಳಿದ ಸ್ಥಳೀಯ ನಾಗರಿಕರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ನಾಗರಿಕರು ಹಾಗೂ ಪೊಲೀಸರು ಗಾಯಗೊಂಡವರನ್ನು ಬೆಳಗಾವಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದ್ದಾರೆ.