This is the title of the web page
This is the title of the web page

Live Stream

October 2023
S M T W T F S
1234567
891011121314
15161718192021
22232425262728
293031  

| Latest Version 9.4.1 |

State News

ಡಾ.ವೀರೇಂದ್ರ ಹೆಗ್ಗಡೆಯವರ 75 ನೇ ಜನ್ಮದಿನಕ್ಕೆ 200 ಮಕ್ಕಳಿಂದ ಏಕಕಾಲಕ್ಕೆ ಗಿಟಾರ್‌ ವಾದನ: ವರ್ಲ್ಡ್ ರೆಕಾರ್ಡ್ಸ್ ಆಫ್ ಇಂಡಿಯಾದಿಂದ ಪ್ರಮಾಣಪತ್ರ

Join The Telegram Join The WhatsApp

ಧಾರವಾಡ:
ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ.ವೀರೇಂದ್ರ ಹೆಗ್ಗಡೆ ಅವರ 75ನೇ ಜನ್ಮದಿನದ ಪ್ರಯುಕ್ತ ಧಾರವಾಡದ ವಿದ್ಯಾಗಿರಿಯ ಜೆಎಸ್‌ಎಸ್‌ ಸೆಂಟ್ರಲ್ ಶಾಲೆಯ 200 ಮಕ್ಕಳು ಏಕಕಾಲದಲ್ಲಿ ಗಿಠಾರ್‌ ನುಡಿಸುವ ಮೂಲಕ ಅವರಿಗೆ ಸಂಗೀತ ಸುಧೆಯ ಮೂಲಕ ಜನ್ಮದಿನಕ್ಕೆ ಶುಭಾಶಯ ತಿಳಿಸಿದ್ದರು. ಈ ಶುಭಕೋರಿದ ಸಂದರ್ಭವು ವರ್ಲ್ಡ್ ರೆಕಾರ್ಡ್ಸ್ ಆಫ್ ಇಂಡಿಯಾದಲ್ಲಿ ದಾಖಲಾಗಿತ್ತು. ಅದರ ಪ್ರಮಾಣ ಪತ್ರವನ್ನು ಜೆ.ಎಸ್.ಎಸ್ ಬಯಲು ನಾಟ್ಯಗೃಹ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಂಸ್ಥೆಯ ಕಾರ್ಯದರ್ಶಿ ಡಾ. ಅಜಿತ ಪ್ರಸಾದ ಅವರು ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಸದ್ಯ ಜನತಾ ಶಿಕ್ಷಣ ಸಮಿತಿಯಲ್ಲಿ 22 ಸಾವಿರ ವಿದ್ಯಾರ್ಥಿಗಳು ವಿದ್ಯಾಭ್ಯಾಸವನ್ನು ಮಾಡುತ್ತಿದ್ದಾರೆ. ಜೆ.ಎಸ್.ಎಸ್ ನ ವಿವಿಧ ಶಿಕ್ಷಣ ಸಂಸ್ಥೆಗಳು ಡಾ.ವೀರೇಂದ್ರ ಹೆಗ್ಗಡೆಯವರ 75 ನೇ ಜನ್ಮದಿನದ ನಿಮಿತ್ತ ವರ್ಷಪೂರ್ತಿ 75 ವಿಧಾಯಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿವೆ ಎಂದು ಹೇಳಿದರು.
ಡಾ. ಡಿ. ವೀರೇಂದ್ರ ಹೆಗ್ಗಡೆಯವರು ತಮ್ಮ ಜ್ಞಾನದ ಆಕಾರವನ್ನು ಸುಖ ಹಾಗೂ ವಿಶ್ರಾಂತಿಗಳಿಂದ ಅಂತರವಿರಿಸಿ ರಾಜ್ಯದೆಲ್ಲೆಡೆ ಯೋಜನೆ-ಯೋಚನೆಗಳನ್ನು ಪ್ರತಿನಿತ್ಯ ಪ್ರತಿ “ಸತ್ಯʼ ಎಂಬಂತೆ ವ್ಯಾಪಿಸಿದ್ದಾರೆ. ಅವರ ಶಿಸ್ತುಬದ್ಧ ಜೀವನ, ಅಭಯ ನೀಡಿದರೆಂದರೆ ಮಾತು ತಪ್ಪದ ಕೈಂಕರ್ಯ ಅಚ್ಚುಕಟ್ಟಾದ ಕಾರ್ಯ ಯೋಜನೆಗೆ ಎಷ್ಟು ಅಭಾರಿ ಎಂದರೆ ಅವರು ಗ್ರಾಮಾಭಿವೃದ್ದಿ ಮುಖೇನ ಹಲವಾರು ಕುಟುಂಬಗಳಿಗೆ ಉದ್ಯೋಗ “ಕಲ್ಪಿಸಿರುವುದೇ ಸಾಕ್ಷಿ ಎಂದು ಹೇಳಿದರು.
ಡಾ.ಹೆಗ್ಗಡೆಯವರು ಪಟ್ಟವನ್ನು ಏರಿ ಪರಂಪರಾಗತ ಇತಿಹಾಸವನ್ನು ಅಗರ್ಭ ಪರಿಪಾಲಕರಾಗಿಸಿದವರು. ಕೇವಲ ಧರ್ಮಶಿಕ್ಷಣ, ದಾನ-ಧರ್ಮವೊಂದೇ ಜನರ ಕಲ್ಯಾಣವಲ್ಲ ಎಂಬುದನ್ನು ಅರಿತು ನಾಡಿನ ಸುಭೀಕ್ಷೆಗೆ ಅಷ್ಟ ದಿಕ್ಕುಗಳಲ್ಲೂ ಪರಿವರ್ತನೆ ಬಯಸಿ ಆಧುನಿಕ ಆಡಳಿತ ಪದ್ಧತಿಗೆ ಹೆಗ್ಗುರುತಾದವರು ಅವರು. ಗ್ರಾಮ ಸುಭೀಕ್ಷೆಗೆ ಗ್ರಾಮಾಭಿವೃದ್ಧಿ ಯೋಜನೆ, ಶಿಕ್ಷಣ ಕ್ರಾಂತಿಗೆ ಶಿಕ್ಷಣ ಸಂಸ್ಥೆಗಳು, ಸೇವಾ ಕಾರ್ಯಕ್ಕಾಗಿ ಚತುರ್ಧಾನ, ಸಾಂಸ್ಕೃತಿಕ, ಸಾಮಾಜಿಕ ಸ್ವರಗಳ ಸರ್ವಧರ್ಮ ಸಾಹಿತ್ಯ ಸಮ್ಮೇಳನ, ಅಶಕ್ತರ ಸಬಲೀಕರಣಕ್ಕಾಗಿ ಸ್ವ ಉದ್ಯೋಗ, ಧರ್ಮ ಶಿಕ್ಷಣಕ್ಕಾಗಿ ಆಲಯಗಳ ಜೀರ್ಣೋದ್ದಾರ ಸೇರಿದಂತೆ ಸಹಸ್ರಾರು ಯೋಜನೆಗಳ ಹರಿಕಾರರಾಗಿ ಪರಮೋಚ್ಚ ಸ್ಥಾನವನ್ನುಜನತಾ ಶಿಕ್ಷಣ ಸಮಿತಿಯ ಕಾರ್ಯಾಧ್ಯಕ್ಷರೂ ಆದ ಡಾ. ಡಿ. ವೀರೆಂದ್ರ ಹೆಗ್ಗಡೆಯವರು ಅರ್ಥಪೂರ್ಣವಾಗಿ ಮುನ್ನಡೆಸಿದ್ದಾರೆ ಎಂದರು.


Join The Telegram Join The WhatsApp
Admin
the authorAdmin

Leave a Reply